ರಚಿತಾ ರಾಮ್, ಇದುವರೆಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದರ ಪರ ಮತಯಾಚಿಸಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ರೈತರ ಪರ ಕಾಳಜಿಯಿದೆ. ಅವರ ಬಳಿ ಒಳ್ಳೊಳ್ಳೆಯ ಯೋಜನೆಗಳಿವೆ. ಹೀಗಾಗಿ ಎಲ್ಲರೂ ಜೆಡಿಎಸ್ಗೇ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ ರಚಿತಾ ರಾಮ್.
ಸದ್ಯಕ್ಕೆ ರಚಿತಾ ರಾಮ್ ಅವರ ಪ್ರಚಾರ ಸೋಷಿಯಲ್ ಮೀಡಿಯಾಕ್ಕೆ ಮಾತ್ರ ಸೀಮಿತವಾಗಿದೆ. ಹಾಗಂತ ರಚಿತಾ, ಜೆಡಿಎಸ್ ಸದಸ್ಯೆಯೇನೂ ಅಲ್ಲ. ನನಗೆ ಕುಮಾರಸ್ವಾಮಿ ಇಷ್ಟದ ನಾಯಕ ಎಂದಿದ್ದಾರೆ ರಚಿತಾ.