ಬಿಎಂಡಬ್ಲ್ಯುಆರ್1200, ಇದು ಕಿಚ್ಚನ ಮನೆ ಸೇರಿರುವ ಹೊಸ ಬೈಕು. ಸುದೀಪ್ ಮನೆಯಲ್ಲಿ ಈಗಾಗಲೇ ಹಾರ್ಲೆ ಡೇವಿನ್‍ಸನ್, ರಾಯಲ್ ಎನ್‍ಫೀಲ್ಡ್ ಬುಲೆಟ್, ಯಮಹಾ ಆರ್‍ಎಕ್ಸ್ 100 ಸೇರಿದಂತೆ ಹಲವಾರು ಬೈಕ್‍ಗಳಿವೆ. ಜಾಗ್ವಾರ್, ಬಿಎಂಡಬ್ಲ್ಯು, ಲ್ಯಾಂಡ್‍ರೋವರ್, ಫೋರ್ಡ್ ಎಂಡೇವರ್, ಮಿನಿ ಕೂಪರ್, ಆಡಿ, ಇನ್ನೋವಾ.. ಹೀಗೆ ದುಬಾರಿ ಕಾರುಗಳೂ ಇವೆ. ಆದರೂ ಕಿಚ್ಚನಿಗೆ ಬೈಕ್ ಓಡಿಸೋದಂದ್ರೆ ಥ್ರಿಲ್ಲು.
ಇತ್ತೀಚೆಗಷ್ಟೇ ಈ ಬೈಕು ಖರೀದಿಸಿದ ಸುದೀಪ್, ಬೈಕ್ ಹತ್ತಿ ಸಿಟಿ ರೌಂಡ್ಸ್ ಹೊಡೆದಿದ್ದಾರೆ. ಹೆಲ್ಮೆಟ್‍ನ್ನು ಎಲ್ಲಿಯೂ ತೆಗೆಯದೆ, ಸಿಟಿಯಲ್ಲಿ ರೌಂಡ್ ಹಾಕಿ ಖುಷಿಪಟ್ಟಿದ್ದಾರೆ. ಹೆಲ್ಮೆಟ್ ತೆಗೆದು, ಯಾರಾದರು ಗುರುತಿಸಿದ್ದರೆ, ರೌಂಡ್ಸ್‍ನ ಮಜಾ ಹೋಗುತ್ತೆ ಅನ್ನೋದು ಸುದೀಪ್‍ಗೆ ಗೊತ್ತಿಲ್ಲದ ವಿಚಾರವೇನಲ್ಲ.
ಚಂದನ್ ಮತ್ತು ನಿರ್ದೇಶಕ ಕೃಷ್ಣ, ಮತ್ತೊಂದು ಬೈಕ್‍ನಲ್ಲಿ ಸುದೀಪ್ ಅವರನ್ನು ಫಾಲೋ ಮಾಡಿದ್ದಾರೆ. ಹಿಂದೆ ರಾಜಮಹಾರಾಜರು ಮಾರುವೇಷದಲ್ಲಿ ದೇಶ ಸಂಚಾರ ಮಾಡುತ್ತಿದ್ದರಂತೆ. ಈಗ ಸೆಲಬ್ರಿಟಿಗಳ ಸರದಿ.