ಚಿತ್ರನಟಿ ಅಮೂಲ್ಯಾ, ರಾಜಕಾರಣದಲ್ಲಿ ಪ್ರಥಮ ಪಾದ ಊರಿದ್ದಾರೆ. ಚೆಲುವಿನ ಚಿತ್ತಾರ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಅಮೂಲ್ಯ, ಈಗ ಅಮೂಲ್ಯ ಜಗದೀಶ್ ಆಗಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಮೂಲ್ಯ ಅವರ ಮಾವ ಜಿ.ಹೆಚ್. ರಾಮಚಮದ್ರ, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಮಾವನ ಜೊತೆ ಅಮೂಲ್ಯ ಕೂಡಾ ಜೆಡಿಎಸ್ ಸೇರಿದ್ದಾರೆ. ಅಮೂಲ್ಯ ಅವರನ್ನು ದೇವೇಗೌಡರೇ ಆಶೀರ್ವಾದ ಮಾಡಿ ಬರಮಾಡಿಕೊಂಡಿದ್ದು ವಿಶೇಷ.
ನನಗೆ ರಾಜಕೀಯ ಅಷ್ಟಾಗಿ ಗೊತ್ತಿಲ್ಲ. ಮಾವನವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಟ್ಟರೆ, ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಪ್ರಚಾರ ಮಾಡುವ ಯೋಚನೆ ಇಲ್ಲ ಎಂದಿದ್ದಾರೆ ಅಮೂಲ್ಯ.