` ಸಾಗುವ ದಾರಿಯಲಿ ಸವಾಲುಗಳ ಚಕ್ರವ್ಯೂಹ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
saguva dariyalli on april 20th
Saguva Dariyalli Movie Image

ತಾಯಿಯಿಲ್ಲದ ಮಗ..ಆತನನ್ನು ಶಿಸ್ತಿನಿಂದ ಬೆಳೆಸಿರುವ ಅಪ್ಪ.. ಮಗನಿಗೆ ತಾಯಿಗೆ ಕೊಟ್ಟ ಮಾತೇ ಮುಖ್ಯ.. ಇದು ಸಾಗುವ ದಾರಿಯಲಿ ಚಿತ್ರದ ಥೀಮ್. ಇಲ್ಲಿ ಹೀರೋ ಅನೂಪ್ ಸಾ.ರಾ.ಗೋವಿಂದು. ಮಿಲಿಟರಿ ಆಫೀಸರ್ ಆಗಿ ನಟಿಸಿರುವ ದೇವರಾಜ್, ಅನೂಪ್‍ರ ತಂದೆಯ ಪಾತ್ರದಲ್ಲಿದ್ದಾರೆ. ನಾಯಕ ಅನೂಪ್ ಸಾಗುವ ದಾರಿಯಲ್ಲಿ ಆಗುವ ಅನುಭವಗಳೇ ಚಿತ್ರದ ಕಥೆ.

2001ರಲ್ಲಿ ನಡೆದಿದ್ದ ನೈಜ ಘಟನೆಯೇ ಚಿತ್ರದ ಕಥೆಗೆ ಆಧಾರ ಎಂದಿದ್ದಾರೆ ನಿರ್ದೇಶಕ ಶಿವಕುಮಾರ್ ಎಸ್.ಗೌಡ. ಹಲವು ಡಾಕ್ಯುಮೆಂಟರಿ, ಕಿರುಚಿತ್ರ ನಿರ್ದೇಶಿಸಿರುವ ಶಿವಕುಮಾರ್‍ಗೆ ಇದು ಚೊಚ್ಚಲ ಸಿನಿಮಾ. ಪವಿತ್ರಾ ಗೌಡ ನಾಯಕಿಯಾಗಿರುವ ಚಿತ್ರದಲ್ಲಿ ರಂಗಾಯಣ ರಘು, ಪ್ರಕಾಶ್ ರೈ, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಮೊದಲಾದವರಿದ್ದಾರೆ. ಚಿತ್ರ ಇದೇ ವಾರ ರಿಲೀಸ್.

The Terrorist Movie Gallery

Kumari 21 Movie Gallery