ಅಸತೋಮಾ ಸದ್ಗಮಯ.. ವಿಭಿನ್ನ ಕಥಾ ಹಂದರ ಇರುವ ಈ ಚಿತ್ರದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿದ್ದಾರೆ. ಮಕ್ಕಳ ಶಿಕ್ಷಣದ ಸುತ್ತಲೇ ಇರುವ ಚಿತ್ರದ ಟ್ರೇಲರ್, ತನ್ನ ವಿಭಿನ್ನತೆಯಿಂದಲೇ ಸದ್ದು ಮಾಡುತ್ತಿದೆ.
ಚಿತ್ರನಟರಾದ ಶರಣ್, ಪ್ರಥಮ್, ಕಿರಿಕ್ ಕೀರ್ತಿ, ಪ್ರಥಮ್, ಚಂದನ್ ಶೆಟ್ಟಿ, ಇಂದ್ರಜಿತ್ ಲಂಕೇಶ್.. ಹೀಗೆ ಸಿನಿಮಾ ಟ್ರೇಲರ್ ನೋಡಿದ ಚಿತ್ರಂಗದವರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೂ ಇರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ವಿಜಯ್ ಪ್ರಕಾಶ್ ಹಾಡಿರುವ ಸ್ಕ್ರಿಪ್ಟ್ ಬರೆದೋನು ಹಾಗೂ ಓ ಸಂಜೆ ಹಾಡುಗಳು ಹಿಟ್ ಆಗುತ್ತಿವೆ.
ಅಶ್ವಿನ್ ಪಿರೇರಾ ನಿರ್ಮಾಣದ ಚಿತ್ರಕ್ಕೆ ರಾಜೇಶ್ ವೇಣೂರು ನಿರ್ದೇಶನವಿದೆ. ಬಿಡುಗಡೆಗೆ ಸಿದ್ಧವಾಗಿರುವ ಅಸತೋಮಾ ಸದ್ಗಮಯ.. ಕತ್ತಲಿಂದ ಬೆಳಕಿನೆಡೆಗೆ ಎಂಬ ಚಿತ್ರದ ಟೈಟಲ್ನಲ್ಲೇ ಇರುವ ವಿಭಿನ್ನತೆ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ.