` ಯಶ್ ರಾಜಕೀಯದ ಮಾತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash talks about politics
Yash Image

ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲಿ ಯಶ್ ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದು ಮತದಾರರು, ರಾಜಕಾರಣಿಗಳು ಎಲ್ಲರಿಗೂ ಎಚ್ಚರಿಕೆ ಗಂಟೆಯೂ ಹೌದು.ಜನಪ್ರತಿನಿಧಿಗಳಷ್ಟೆ ಅಲ್ಲ, ಜನರೂ ಪ್ರಾಮಾಣಿಕರಾಗಿರಬೇಕು.

ಹಣ ಇದ್ದರೆ, ಚುನಾವಣೆ ಗೆಲ್ಲಬಹುದು ಎಂಬ ಜನಪ್ರತಿನಿಧಿಗಳ ನಂಬಿಕೆಯನ್ನು ಮೊದಲು ನಾವು ಸುಳ್ಳು ಮಾಡಬೇಕು. ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲೂ ಯಾವ ರಾಜಕಾರಣಿಯೂ ನಾನು ಇಂತಿಂತಹ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಬದಲಿಗೆ ಅವರು ಇಷ್ಟು ಹಗರಣ ಮಾಡಿದ್ರು. ಇವರು ಈ ಹಗರಣ ಮಾಡಿದ್ರು ಎನ್ನುತ್ತಿದ್ದಾರೆ. ತನ್ನ ಕ್ಷೇತ್ರದ ಬಗ್ಗೆ ಬದ್ಧತೆಯಿಂದ ಮಾತನಾಡಿದ ರಾಜಕಾರಣಿ ನನ್ನ ಕಣ್ಣಿಗೆ ಬಿದ್ದಿಲ್ಲ.ದೊಡ್ಡ ದೊಡ್ಡ ಪ್ರಾಜೆಕ್ಟುಗಳ ಬಗ್ಗೆ ಮಾತನಾಡುವುದಕ್ಕಿಂತ, ಈಗಲೂ ಜನರ ಕೈಗೆ ಸಿಗದೇ ಇರುವ ರಸ್ತೆ, ಕೆರೆ, ಶಿಕ್ಷಣ, ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸುವವರಿಗೆ ನಾವು ಆದ್ಯತೆ ಕೊಡೋಣ.

ಆದರೆ, ಇವುಗಳನ್ನು ಬಿಟ್ಟು, ಜಾತಿ, ಧರ್ಮಗಳ ಬಗ್ಗೆಯಷ್ಟೇ ಮಾತನಾಡುವುದನ್ನು ನೋಡಿದರೆ, ಬೇಸರ ಹುಟ್ಟುತ್ತೆ.ಜನಪ್ರತಿನಿಧಿಗಳನ್ನು ಮನೆಯ ಮದುವೆ, ತಿಥಿ, ಸಾವುಗಳಿಗೆ ಕರೆಯೋದನ್ನು ನಾವು ಬಿಡಬೇಕು. ವೈಯಕ್ತಿಕ ಕೆಲಸಗಳಿಗೆ ಅಂಗಲಾಚುವುದನ್ನು ಬಿಡಬೇಕು. ಹಾಗೆ ಕರೆಯುವವರೆಗೆ ಅವರು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ.

ಇವರ ಮನೆ ಸಮಾರಂಭಗಳಿಗೆ ಹೋಗಿ ಬಂದರೆ ಸಾಕು ಎಂದು ಜನಪ್ರತಿನಿಧಿಗಳು ಅಂದುಕೊಂಡುಬಿಡ್ತಾರೆ.ಪ್ರಚಾರ ಮಾಡಬೇಕೋ ಬೇಡವೋ ನಿರ್ಧರಿಸಿಲ್ಲ.ನಾನು ಯಾರ ಪರವಾದರೂ ಪ್ರಚಾರ ಮಾಡಿದರೆ, ನಾಳೆ ಆತನನ್ನು ಪ್ರಶ್ನಿಸುವ ಅಧಿಕಾರವೂ ನನಗೆ ಬೇಕು. ಅದು ಸಾಧ್ಯವಿಲ್ಲದಿದ್ದರೆ, ನಾನು ಪ್ರಚಾರ ಮಾಡುವುದೂ ಸಾಧ್ಯವಿಲ್ಲ.

ಇದು ಯಶ್ ಅವರ ರಾಜಕೀಯದ ಮಾತುಗಳು.