ಮಕ್ರ್ಯುರಿ, ಕೊಡೈಕೆನಾಲ್‍ನಲ್ಲಿ ಪಾದರಸ ಫ್ಯಾಕ್ಟರಿಯೊಂದರಲ್ಲಿ ನಡೆದ ದುರಂತಗಳ ಸರಮಾಲೆಗಳ ಕಥೆ. ನೀವು ಮಕ್ರ್ಯುರಿ ಚಿತ್ರದ ಪೋಸ್ಟರ್‍ನ್ನು ಒಮ್ಮೆ ನೆನಪಿಸಿಕೊಳ್ಳಿ. ಅದು ಪಾದರಸದ ಎಫೆಕ್ಟ್‍ನ ಪಿಕ್ಚರ್. ಕಾರ್ಖಾನೆಗಳಿಂದ ಸೋರಿಕೆಯಾಗುವ ಕೆಮಿಕಲ್ ಜನರ ಮೇಲೆ ಏನೇನೆಲ್ಲ ಪರಿಣಾಮ ಬೀರಬಹುದು ಅನ್ನೋದನ್ನ ತೆರೆಯ ಮೇಲೆ ತರಲಾಗಿದೆ.
ಸಾಮಾನ್ಯವಾಗಿ ಸಿನಿಮಾದ ಕಡೆಯ 20 ನಿಮಿಷವನ್ನ ಕ್ಲೈಮಾಕ್ಸ್ ಅಂತಾರೆ. ಆದರೆ, ಈ ಸಿನಿಮಾದಲ್ಲಿ ಕಡೆಯ ಒಂದೂವರೆ ಗಂಟೆ.. ಸಂಪೂರ್ಣ ಕ್ಲೈಮಾಕ್ಸ್‍ನ ಫೀಲ್ ಕೊಡುತ್ತದಂತೆ. ಹೀಗೆಂದು ಹೇಳಿರುವುದು ಪ್ರಭುದೇವ.
ಮಕ್ರ್ಯುರಿ ನಿಮಗೆ ಅಚ್ಚರಿ ಉಂಟು ಮಾಡುತ್ತೆ. ನೋಡ್ತಾ ನೋಡ್ತಾ ಶಾಕ್ ಆಗ್ತೀರಿ. ಮನಸ್ಸಿನೊಳಗೆ ಪ್ರಶ್ನೆಗಳು ಉದ್ಭವವಾಗುತ್ತಾ ಹೋಗುತ್ತವೆ. ಮಕ್ರ್ಯುರಿ ನಮ್ಮನ್ನು ಪ್ರಶ್ನೆ ಮಾಡುತ್ತಲೇ ಹೋಗುತ್ತೆ. ಹೀಗಾಗಿಯೇ.. ಈ ಸಂದೇಶ ಇರುವ ಕಾರಣಕ್ಕಾಗಿಯೇ ಈ ಚಿತ್ರದ ಕರ್ನಾಟಕ ವಿತರಣೆಯನ್ನು ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪರಂವಾ ಸ್ಟುಡಿಯೋಸ್ ವಹಿಸಿಕೊಂಡಿರುವುದು. ಸಿನಿಮಾ ನಾಳೆಯೇ ರಿಲೀಸ್.