ಮಾಮ ಅಂದ್ರೆ ಪ್ರೇಮ್ ಯಾಕೆ ತಿರುಗಿ ನೋಡ್ಬೇಕು ಅಂತೀರಾ..? ಕರೆದಿದ್ದು ಕೃತಿ ಕರಬಂಧ ಆದರೆ, ತಿರುಗಿ ನೋಡ್ಲೇಬೇಕಲ್ವಾ..? ಅಂಥ ಚೆಂದದ ಹುಡುಗಿ ಪ್ರೀತಿಯಿಂದ ಮಾಮಾ ಅಂತಾ ಕರೆದಾಗ.. ತಿರುಗಿ ನೋಡದೇ ಇರೋಕಾದ್ರೂ ಹೇಗೆ ಸಾಧ್ಯ ಹೇಳಿ. ಇದು ದಳಪತಿ ಚಿತ್ರದ ಶೂಟಿಂಗ್‍ನಲ್ಲಿ ನಡೀತಿದ್ದ ಸ್ವಾರಸ್ಯದ ಒಂದು ಭಾಗವಷ್ಟೆ.
ಕ್ಯಾಮೆರಾ ಆಫ್ ಆದ ನಂತರವೂ ಪ್ರೇಮ್ ಲವಲವಿಕೆಯ ನಟ. ಸೆಟ್‍ನಲ್ಲಿದ್ದವರನ್ನೆಲ್ಲ ನಗುತ್ತಾ, ನಗಿಸುತ್ತಾ ಇರುವ ಕಲಾವಿದ. ಆ ತಮಾಷೆಯ ವ್ಯಕ್ತಿತ್ವ ಕೃತಿಗೂ ಇಷ್ಟವಾಗಿಬಿಟ್ಟಿತ್ತಂತೆ. ಶೂಟಿಂಗ್ ಟೈಮಲ್ಲಿ ಇಬ್ಬರೂ ಒಟ್ಟಿಗೇ ಟ್ರ್ಯಾಕ್ಟರ್ ಓಡಿಸಿದ್ದೂ ಇದೆ ಎಂದು ಶೂಟಿಂಗ್ ನೆನಪು ಹಂಚಿಕೊಂಡಿದ್ದಾರೆ ಕೃತಿ ಮತ್ತು ಪ್ರೇಮ್.
ಅಂದಹಾಗೆ ಕೃತಿ ಮಾಮಾ ಎಂದಾಗಲೆಲ್ಲ ಪ್ರೇಮ್ ಕೃತಿಯನ್ನು ಕರೆಯುತ್ತಿದ್ದುದು ಭಾಜಿ ಅಂತಾ.
ಏ.13ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಫ್ರೆಶ್ ಆದ ಲವ್‍ಸ್ಟೋರಿಯಿಂದ. ನಿರ್ದೇಶಕ ಪ್ರಶಾಂತ್ ರಾಜ್ ಹೆಸರಾಗಿರುವುದೇ ವಿಭಿನ್ನ ಲವ್‍ಸ್ಟೋರಿಗಳಿಗೆ. ದಳಪತಿ ಅನ್ನೋ ಹೆಸರಿಟ್ಟುಕೊಂಡು ಅದರಲ್ಲಿ ಎಂಥ ಲವ್‍ಸ್ಟೋರಿ ಹೇಳ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಿಗೂ ಇದೆ.