ನೆನಪಿರಲಿ ಪ್ರೇಮ್, 25ನೇ ಸಿನಿಮಾದ ಹೊಸ್ತಿಲಲ್ಲಿ ನಿಂತಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ದಳಪತಿ, ಅವರ 23ನೇ ಸಿನಿಮಾ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೈಫ್ ಜೊತೆ ಒಂದ್ ಸೆಲ್ಫಿ, 24ನೇ ಚಿತ್ರ. ಅದಾದ ನಂತರದ್ದು ಇನ್ನೂ ಫೈನಲ್ ಆಗಿಲ್ಲ.
ಹೇಗಿರಬೇಕು ನಿಮ್ಮ 25ನೇ ಸಿನಿಮಾ ಎಂದರೆ, ಪ್ರೇಮ್ ಕಣ್ಣೆದುರು ನಲಿದಾಡುವುದು ಅಣ್ಣಾವ್ರ ಮಯೂರ. ಅಂಥಾದ್ದೊಂದು ಐತಿಹಾಸಿಕ ಪಾತ್ರವನ್ನು ನಾನು ಮಾಡಬೇಕು. ಕನ್ನಡದಲ್ಲಿ ಎಷ್ಟೆಲ್ಲ ಐತಿಹಾಸಿಕ ನಾಯಕರಿದ್ದಾರೆ. ಎಚ್ಚಮನಾಯಕ, ಮದಕರಿ ನಾಯಕ, ನೃಪತುಂಗ.. ಇಂತಹವರ ಕಥೆಗಳನ್ನು ಸಿನಿಮಾ ಮಾಡಬೇಕು ಎನ್ನುತ್ತಾರೆ ಪ್ರೇಮ್.
ಇಂತಹ ಕಥೆಗಳನ್ನು ಸಿನಿಮಾ ಮಾಡುತ್ತೇನೆ ಎಂದರೆ, ಎಷ್ಟು ಡೇಟ್ಸ್ ಬೇಕಾದರೂ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ ಎನ್ನುವ ಪ್ರೇಮ್‍ಗೆ ತಮ್ಮ 25ನೇ ಸಿನಿಮಾ ಐತಿಹಾಸಿಕ ಚಿತ್ರವಾಗಬೇಕು ಎಂಬ ಕನಸು ಹೊತ್ತಿದ್ದಾರೆ. ಆ ಕನಸಿಗೆ ನೀರೆರೆಯುವ ನಿರ್ಮಾಪಕ, ನಿರ್ದೇಶಕರು ಸಿಗಬೇಕಷ್ಟೆ. ಸದ್ಯಕ್ಕೆ ದಳಪತಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ ಪ್ರೇಮ್.