ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ತಮ್ಮ ಹೃದಯವಂತಿಕೆ ಮೆರೆದಿದ್ದಾರೆ. ಪೂರ್ವಿಕಾ ಅನ್ನೋ ತಮ್ಮ ಅಭಿಮಾನಿಯನ್ನು ತಮ್ಮ ಸೆಟ್‍ಗೇ ಕರೆಸಿಕೊಂಡು ಮಾತನಾಡಿಸಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ.
ಪೂರ್ವಿಕಾ ಮಂಡ್ಯದ ಮದ್ದೂರು ಬಳಿಯ ಹಳ್ಳಿಯೊಂದರ ಬಾಲೆ. ಹೃದಯದಲ್ಲಿ ರಂಧ್ರವಾಗಿದ್ದು ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ. ಆಪರೇಷನ್‍ಗೆ ಹೋಗುವ ಮುನ್ನ ದರ್ಶನ್ ಅವರನ್ನು ನೋಡಬೇಕು ಎಂದು ಬಯಸಿದ್ದ ಅಭಿಮಾನಿಯ ಬಯಕೆಯನ್ನು ದರ್ಶನ್ ಈ ರೀತಿ ಈಡೇರಿಸಿದ್ದಾರೆ. ಮೈಸೂರಿನಲ್ಲಿ ತಮ್ಮ ಯಜಮಾನ ಚಿತ್ರದ ಚಿತ್ರೀಕರಣದ ಸೆಟ್‍ಗೇ ಕರೆಸಿಕೊಂಡಿದ್ದ ದರ್ಶನ್, ಚಿತ್ರೀಕರಣವನ್ನೆಲ್ಲ ತೋರಿಸಿ, ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.