ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ತಮಿಳು ಸೂಪರ್‍ಸ್ಟಾರ್ ರಜನಿಕಾಂತ್ ಹಾಗೂ ಕಮಲ್‍ಹಾಸನ್‍ರ ಚಿತ್ರಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕುವ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ಕೊಟ್ಟಿದ್ದಾರೆ. ಚಿತ್ರದ ಪ್ರದರ್ಶನದ ಹಕ್ಕುಗಳನ್ನು ಖರೀದಿ ಮಾಡದಂತೆ ವಿತರಕರಿಗೆ ಸೂಚಿಸಿದ್ದಾರೆ.
ಅಷ್ಟೇ ಅಲ್ಲ, ರಜನಿ, ಕಮಲ್ ಚಿತ್ರಗಳನ್ನು ಪ್ರದರ್ಶನ ಮಾಡದಂತೆ ಪ್ರದರ್ಶಕರಿಗೂ ಮನವಿ ಮಾಡಿದ್ದಾರೆ. ಅಕಸ್ಮಾತ್ ಪ್ರದರ್ಶನ ಮಾಡಿದರೆ ಪ್ರತಿಭಟನೆ ನಡೆಸಿ ಚಿತ್ರಪ್ರದರ್ಶನ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ತಮಿಳುನಾಡು ಹೋರಾಟ ಬೆಂಬಲಿಸುವುದು ನಿಮ್ಮ ಕರ್ತವ್ಯ. ಆದರೆ, ಹಾಗೆಂದು ಕರ್ನಾಟಕವನ್ನು ಟೀಕಿಸುವುದು ಸರಿಯಲ್ಲ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸುವುದಿಲ್ಲ. ನಿಮ್ಮ ರಾಜಕೀಯಕ್ಕಾಗಿ ಕಾವೇರಿಯನ್ನು ಬಳಸಿಕೊಳ್ಳಬೇಡಿ ಎಂದು ಕಮಲ್‍ಹಾಸನ್ ಹಾಗೂ ರಜನಿಕಾಂತ್ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದಾರಾ ಸಾ.ರಾ.ಗೋವಿಂದು.