ಕೈತುಂಬಾ ಮೆಹಂದಿಯ ರಂಗು.. ಮೈತುಂಬಾ ಅಲಂಕಾರ.. ಒಡವೆ.. ನವವಧುವಿನಂತೆ ಕಂಗೊಳಿಸಿದ್ದಾರೆ ಪಾರುಲ್ ಯಾದವ್..ಅವರ ಮದುವೆಯಲ್ಲಿ. ಇಲ್ಲಿ ಮದುಮಗಳಾಗಿರೋದು ಪಾರುಲ್ ಯಾದವ್ ಅಲಿಯಾಸ್ ಪಾರ್ವತಿ.
ಪಾರುಲ್ ಯಾವಾಗ ಪಾರ್ವತಿಯಾದರು ಎಂದು ತಲೆಗೆ ಹುಳು ಬಿಟ್ಟುಕೊಳ್ಳಬೇಡಿ. ಬಟರ್‍ಫ್ಲೈ ಚಿತ್ರದಲ್ಲಿ ಪಾರುಲ್ ಪಾತ್ರದ ಹೆಸರು ಪಾರ್ವತಿ. ನಮ್ಮ ಮನೆಲೊಂದು ಬಾಳ ದೊಡ್ಡ ಕಾರ್ಯಕ್ರಮ ಅನ್ನೋ ಹಾಡಿನ ಮೂಲವೇ ಮದುವೆ. ಬಟರ್‍ಫ್ಲೈ ಚಿತ್ರಕ್ಕಾಗಿ.
ಯೋಗರಾಜ್ ಭಟ್ಟರ ಹಾಡಿಗೆ ಬಾಲಿವುಡ್ ಕೊರಿಯೋಗ್ರಾಫರ್ ಸೀಜರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲೊಂದು ಹಳೆಯ ಸಿನಿಮಾ ಹಾಡುಗಳ ರೀಮಿಕ್ಸ್ ಹಾಡು ಕೂಡಾ ಇದೆಯಂತೆ. ಚಿತ್ರದ ನಿರ್ದೇಶಕ ರಮೇಶ್ ಅರವಿಂದ್. ಚಿತ್ರದ ನಿರ್ಮಾಪಕಿಯರಲ್ಲಿ ಪಾರುಲ್ ಕೂಡಾ ಒಬ್ಬರು.