ದಳಪತಿ ಚಿತ್ರದಲ್ಲಿ ಲೇಡಿ ರೌಡಿಯಾಗಿ ಕಾಣಿಸಿಕೊಂಡಿರುವ ಕೃತಿ ಕರಬಂಧ, ಚಿತ್ರದಲ್ಲಿ ಟ್ರ್ಯಾಕ್ಟರ್ ಡ್ರೈವರ್ ಕೂಡಾ ಆಗಿದ್ದಾರೆ. ಟ್ರ್ಯಾಕ್ಟರ್ ಓಡಿಸುವುದು ಕಾರು, ಜೀಪು ಓಡಿಸಿದ ಹಾಗಲ್ಲ. ಟ್ರ್ಯಾಕ್ಟರ್‍ಗ ಗೇರು, ಕ್ಲಚ್ಚು, ಸ್ಟೇರಿಂಗು, ಬ್ರೇಕು ಎಲ್ಲವೂ ರಫ್ ಆಗಿರುತ್ತವೆ. ಹಾಗೆ ಟ್ರ್ಯಾಕ್ಟರ್‍ನ್ನು ಓಡಿಸುವ ಅನುಭವ ಇಲ್ಲದೇ ಇದ್ದರೂ, ಟ್ರ್ಯಾಕ್ಟರ್ ಓಡಿಸಿದ್ದಾರೆ ಕೃತಿ ಕರಬಂಧ.
ನಿರ್ದೇಶಕರು ರಿಯಲ್ಲಾಗಿಯೇ ಟ್ರ್ಯಾಕ್ಟರ್ ಓಡಿಸೋಕೆ ಹೇಳಿದ್ದರು. ಹಾಗಾಗಿ ಸ್ವಲ್ಪ ತರಬೇತಿ ಪಡೆದುಕೊಂಡೇ ಚಲಾಯಿಸಿದೆ. ಜೊತೆಗೆ ಟ್ರ್ಯಾಕ್ಟರ್‍ನ ಮುಂದೆ ಪ್ರೇಮ್ ಕುಳಿತಿರುತ್ತಾರೆ. ಟ್ರ್ಯಾಕ್ಟರ್ ಓಡಿಸುತ್ತಲೇ ರೊಮ್ಯಾಂಟಿಕ್ ಹಾಡಿಗೆ ರಿಯಾಕ್ಷನ್ ಕೊಡಬೇಕಿತ್ತು. ಎಲ್ಲವನ್ನೂ ನಿಭಾಯಿಸಿದೆವು ಎಂದು ಹೇಳಿಕೊಂಡಿದ್ದಾರೆ ಕೃತಿ ಕರಬಂಧ.
ಚಿತ್ರದಲ್ಲಿನ ಗುನುಗುನುಗುನುಗವ.. ಹಾಡಿಗೆ ಈ ರೀತಿ ಟ್ರ್ಯಾಕ್ಟರ್ ಓಡಿಸಿದ್ದಾರೆ ಕೃತಿ. ನೈಜವಾಗಿರಲಿ ಎಂಬ ಉದ್ದೇಶದಿಂದ ಕಲಾವಿದರಿಂದಲೇ ಇವುಗಳನ್ನು ಮಾಡಿಸುತ್ತೇನೆ. ಕೃತಿ ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೊಂಡಾಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.