ರಾಕಿಂಗ್ ಸ್ಟಾರ್ ಗಡ್ಡವಿಲ್ಲದೆ ಕಾಣಿಸಿಕೊಂಡಿದ್ದೇ ಇಲ್ಲ. ಅವರ ಇದುವರೆಗಿನ ಸಿನಿಮಾಗಳಲ್ಲಿ ಲಕ್ಕಿ ಬಿಟ್ಟರೆ, ಬೇರೆಲ್ಲ ಚಿತ್ರಗಳಲ್ಲೂ ಗಡ್ಡದೊಂದಿಗೇ ನಟಿಸಿದ್ದಾರೆ ಯಶ್. ಆದರೆ, ಕೆಜಿಎಫ್ ಚಿತ್ರದಲ್ಲಿನ ಯಶ್ ಅವರ ಗಡ್ಡ ಒಂದೂವರೆ ವರ್ಷದಿಂದ ಇತ್ತು. ಪ್ಯಾಂಟು, ಶರ್ಟು ತೆಗೆದು, ಖಾವಿ ತೊಡಿಸಿಬಿಟ್ಟರೆ ಥೇಟು ಋಷಿಯಂತೆ ಕಾಣ್ತಾರೆ ಅಂತಾ ಅಭಿಮಾನಿಗಳು ರೇಗಿಸುವುದೂ ಇತ್ತು.
ಸುಮಾರು ಒಂದುವರೆ ವರ್ಷದಿಂದ ತಮಗೆ ಅಂಟಿಕೊಂಡಿದ್ದ ಗಡ್ಡಕ್ಕೆ ಮುಕ್ತಿ ಕಾಣಿಸೋಕೆ ಯಶ್ ನಿರ್ಧಾರ ಮಾಡಿದ್ದಾರಂತೆ. ಕೆಜಿಎಫ್ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಮುಕ್ತಾಯ ಹಂತದಲ್ಲಿದ್ದು, ಅದು ಮುಗಿದರೆ, ಸಿನಿಮಾ ಮುಗಿದಂತೆ. ಅದಾದ ನಂತರ ಗಡ್ಡಕ್ಕೆ ಮುಕ್ತಿ ನೀಡಲು ಯಶ್ ನಿರ್ಧರಿಸಿದ್ದಾರೆ.