ಚಂದನ್ ಶೆಟ್ಟಿ ಎಂದರೆ ತಕ್ಷಣ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ.. ಹಾಡು. ಆದರೆ, ಚಂದನ್ ಶೆಟ್ಟಿ ಇದಿಷ್ಟೇ ಅಲ್ಲ, ಅವರು ಗಾಯಕರೂ ಹೌದು. ಹಾಡನ್ನು ಬರೆಯುವ ಕಲೆಯೂ ಅವರಿಗೆ ಸಿದ್ಧಿಸಿದೆ. ಸಂಗೀತ ಸಂಯೋಜಿಸುವುದೂ ಗೊತ್ತಿದೆ. ಇದೆಲ್ಲವೂ ಗೊತ್ತಿರುವ ಚಂದನ್ ಶೆಟ್ಟಿ, ಸೀಜರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಂದನ್ ಶೆಟ್ಟಿಯವರಿಗೆ ಇಂತಾದ್ದೊಂದು ಅವಕಾಶ ಕೊಟ್ಟಿದ್ದು ನಿರ್ಮಾಪಕ ತ್ರಿವಿಕ್ರಮ್. ಪವರ್ ಚಿತ್ರದ ಧಮ್ ಪವರೇ ಹಾಡು ಕೇಳಿದ ನಂತರ ತ್ರಿವಿಕ್ರಮ್, ಚಂದನ್ ಅವರನ್ನು ಆಯ್ಕೆ ಮಾಡಿದರಂತೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸದ್ಯಕ್ಕೆ ಹಿಟ್ ಲಿಸ್ಟ್‍ನಲ್ಲಿವೆ. ವೆಸ್ಟರ್ನ್ ಶೈಲಿಯಲ್ಲಿರುವ ಸಂಗೀತ, ಅಭಿಮಾನಿಗಳಿಗೆ ಇಷ್ಟವಾಗಿದೆ.ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರೂಲ್ ಯಾದವ್ ಅಭಿನಯದ ಚಿತ್ರಕ್ಕೆ ವಿನಯ್ ಕೃಷ್ಣ ನಿರ್ದೇಶಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.