ದಳಪತಿ. ಇದೇ ವಾರ ಬಿಡುಗಡೆಯಾಗುತ್ತಿರುವ ಚಿತ್ರ. ಈ ಚಿತ್ರದಲ್ಲಿ ಪ್ರೇಮ್, ಲವ್ ಲೀಡರ್ ಆಗಿ ನಟಿಸಿದ್ದಾರಂತೆ. ಪ್ರೀತಿಸುವ ಪ್ರತಿಯೊಬ್ಬರೂ ಪ್ರೀತಿಯನ್ನು ಪಡೆಯೋಕೆ ಸಾಹಸ ಮಾಡಬೇಕು. ಅಂತಹವರಿಗೆ ಇಲ್ಲೊಂದು ಸಂದೇಶ ಇದೆ ಎಂದು ಹೇಳಿದ್ದಾರೆ ಪ್ರೇಮ್. ಚಿತ್ರದಲ್ಲಿ ಆ್ಯಕ್ಷನ್ ಇದೆಯಾದರೂ ಬಾಂಬ್ ಸಿಡಿಯಲ್ಲ. ಜೀಪು, ಕಾರು ಹಾರಾಡುವುದಿಲ್ಲ. ಚಿತ್ರದಲ್ಲಿ ಮಾಸ್ ಲವ್ ಸ್ಟೋರಿ ಇದೆ. ಅದೇ ಚಿತ್ರದ ಸ್ಪೆಷಲ್ ಅಂತಾರೆ ಪ್ರೇಮ್.
ಪ್ರೀತಿಸುವವರಿಗೆ, ಪ್ರೀತಿಸಬೇಕು ಎಂದು ಕೊಂಡಿರುವವರಿಗೆ ದಳಪತಿಯಲ್ಲೊಂದು ಪಾಠವಿದೆಯಂತೆ. ಅದು ಎಂತಹ ಪಾಠ ಅನ್ನೋದು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ತಾನೆ ಗೊತ್ತಾಗೋದು. ಇದೇ ಶುಕ್ರವಾರ ದಳಪತಿ ರಿಲೀಸ್. ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರದಲ್ಲಿ ಪ್ರೇಮ್‍ಗೆ ಜೊತೆಯಾಗಿರುವುದು ಕೃತಿ ಕರಬಂಧ.