Print 
ravichandran, chiranjeevi sarja, prakash raj seizure vinay krishna,

User Rating: 0 / 5

Star inactiveStar inactiveStar inactiveStar inactiveStar inactive
 
prakash raj slams seizer movie director
Prakash Rai, Vinay Krishna Image

ಗೋಹತ್ಯೆ ಮಾಡೋದು ಮತ್ತು ಹೆತ್ತ ತಾಯಿಯ ತಲೆ ಹಿಡಿಯೋದು ಎರಡೂ ಒಂದೇ. ಇದು ಸೀಜರ್ ಚಿತ್ರದಲ್ಲಿನ ಒಂದು ಡೈಲಾಗ್. ಇದು ಸದ್ಯಕ್ಕೆ ವಿವಾದವಾಗಿದೆ. ಚಿತ್ರ ಬಿಡುಗಡೆ ಹೊತ್ತಿನಲ್ಲಿಯೇ ವಿವಾದದ ಕಿಡಿ ಹೊತ್ತುಕೊಂಡಿದೆ.

ಚಿತ್ರದಲ್ಲಿ ಈ ಡೈಲಾಗ್ ಹೇಳಿರುವುದು ರವಿಚಂದ್ರನ್ ಅವರ ಪಾತ್ರ. ಚಿರಂಜೀವಿ ಸರ್ಜಾ ಚಿತ್ರದ ನಾಯಕ. ಆ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ. ಹೇಳಿಕೇಳಿ ಪ್ರಕಾಶ್ ರೈ, ಗೋಹತ್ಯೆ ನಿಷೇಧದ ವಿರುದ್ಧ ಗುರುತಿಸಿಕೊಂಡಿರುವವರು. ಹೀಗಾಗಿಯೇ ಪ್ರಕಾಶ್ ರೈ ಕೂಡಾ ಈ ಡೈಲಾಗ್ ಬಗ್ಗೆ ಬೇಸರಗೊಂಡಿದ್ದಾರೆ.

ಡೈರೆಕ್ಟರ್‍ಗೆ ಫೋನ್ ಮಾಡಿದ್ದ ಪ್ರಕಾಶ್ ರೈ `ಏನಯ್ಯಾ, ಹೀಗಾ ಡೈಲಾಗ್ ಬರೆಯೋದು. ನಿಂಗೇನ್ ತಲೆ ಇಲ್ವಾ' ಎಂದು ಬೈದಿದ್ದಾರೆ. ವಿಷಯ ಗೊತ್ತಾದ ತಕ್ಷಣ ಫೋನ್ ಮಾಡಿ ನಿರ್ದೇಶಕರಿಗೆ ಉಗಿದೆ ಅನ್ನೋದನ್ನ ಪ್ರಕಾಶ್ ರೈ ಅವರೇ ಹೇಳಿಕೊಂಡಿದ್ದಾರೆ. 

ಆದರೆ ಆ ಡೈಲಾಗ್ ಹೇಳುವ ದೃಶ್ಯದಲ್ಲಿ ನಾನಿಲ್ಲ. ಅಷ್ಟೇ ಸಮಾಧಾನ ಎಂದು ಹೇಳಿದ್ದಾರೆ ಪ್ರಕಾಶ್ ರೈ. ಇಂಥವರೆನ್ನಲ್ಲ ನಿರ್ದೇಶಕರು ಎನ್ನುವುದು ಹೇಗೆ.. ನಾನ್ಸೆನ್ಸ್ ಎಂದಿದ್ದಾರೆ ಪ್ರಕಾಶ್ ರೈ. ಚಿತ್ರದ ನಿದೇಶಕ ವಿನಯ್ ಕೃಷ್ಣ. ಪರೂಲ್ ಯಾದವ್ ಚಿತ್ರದ ನಾಯಕಿ.