` ಜಗ್ಗೇಶ್ ಯಾರಿಗೋ ಹೊಡೆದ್ರಂತೆ.. ರಿಯಲ್ ಕಥೆ ಏನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh clarifies on assault allegation
Jaggesh Image

ಸುದ್ದಿ ಮಾಧ್ಯಮಗಳಲ್ಲಿ ಶನಿವಾರ ಇದ್ದಕ್ಕಿದ್ದಂತೆ ಒಂದು ವಿಡಿಯೋ ಹರಿದಾಡೋಕೆ ಶುರುವಾಯ್ತು. ಯುವಕನೊಬ್ಬನನ್ನು ಜಗ್ಗೇಶ್ ಎಳೆದಾಡುವ ವಿಡಿಯೋ ಅದು. ಚಿತ್ರನಟರಷ್ಟೇ ಅಲ್ಲ, ಬಿಜೆಪಿ ಮುಖಂಡರೂ ಆಗಿರುವ ಜಗ್ಗೇಶ್ ಸಹಜವಾಗಿಯೇ ಸುದ್ದಿಯಾದರು. ಅತ್ತ ಕಲಾವಿದರ ಕ್ರಿಕೆಟ್ ಕಪ್‍ನಲ್ಲಿ ಬ್ಯುಸಿಯಾಗಿದ್ದ ಜಗ್ಗೇಶ್‍ಗೆ ಫೋನ್‍ಗಳ ಸುರಿಮಳೆಯಾಗತೊಡಗಿತು. ಕೊನೆಗೆ ಈ ಬಗ್ಗೆ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

ಜಗ್ಗೇಶ್ ಸ್ಪಷ್ಟನೆ ಇದು. 

ಮಲ್ಲೇಶ್ವರಂ 8ನೇ ಕ್ರಾಸ್‍ನಲ್ಲಿ ಜಗ್ಗೇಶ್ ನನ್ನ ಸಂಬಂಧಿ ಮಾದೇಗೌಡ(ಭೂಮಿಗೀತ ಚಿತ್ರದ ನಿರ್ಮಾಪಕ) ತಮ್ಮ ಮಗನಿಗೆ ಒಂದು ಔಟ್‍ಲೆಟ್ ಹಾಕಿಕೊಟ್ಟಿದ್ದಾರೆ. ಅಲ್ಲಿಗೆ ರವಿಕುಮಾರ್ ಎಂಬ ಯುವಕ ಆಗಾಗ್ಗೆ ಕಾರ್ಪೊರೇಟರ್ ಮಂಜುನಾಥ್ ಹೆಸರು ಹೇಳಿಕೊಂಡು ಬಂದು ಗಲಾಟೆ ಮಾಡುತ್ತಿದ್ದ. ತೊಂದರೆ ಕೊಡುತ್ತಿದ್ದ. ಇದು ಮಂಜುನಾಥ್ ಅವರ ಗಮನಕ್ಕೂ ತಂದಿದ್ದೆ. ನಮ್ಮ ಯಾವ ಹುಡುಗರೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು ಮಂಜುನಾಥ್. ನಿನ್ನೆ ರಾತ್ರಿ ಕೂಡಾ ಹಾಗೆಯೇ ಆಯ್ತು. ಆಗ ನನ್ನ ಜೊತೆಯಲ್ಲಿ ಕಾರ್ಪೊರೇಟರ್ ಮಂಜುನಾಥ್ ಕೂಡಾ ಇದ್ದರು. ಅವರ ಜೊತೆಯಲ್ಲಿಯೇ ನಾನು ಜಾಗಕ್ಕೆ ಹೋದೆ. ಆತನನ್ನು ಹಿಡಿದು ಪೊಲೀಸರಿಗೆ  ಒಪ್ಪಿಸಿದ್ದೇನೆ. ಹೀಗೆ ಹಿಡಿಯುವ ವೇಳೆ ತಳ್ಳಾಟಗಳಾಗಿವೆ. ಅಷ್ಟೆ. ನಾನು ಹೊಡೆದಿಲ್ಲ.

ಆದರೆ, ಇದಕ್ಕೆ ಹೊಡೆತ ತಿಂದಿದ್ದಾರೆ ಎನ್ನಲಾದ ರವಿಕುಮಾರ್ ಹೇಳೋದೇ ಬೇರೆ. ಅವರು ರಸ್ತೆಯಲ್ಲಿಯೇ ಚೇರ್‍ಗಳನ್ನು ಹಾಕಿದ್ದರು. ನಾನು ಪ್ರಶ್ನೆ ಮಾಡಿದೆ. ನಾವು ಬಿಬಿಎಂಪಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಧಿಮಾಕಿನಿಂದ ಉತ್ತರಿಸಿದ್ರು. ನಾನು ಪ್ರಶ್ನೆ ಮಾಡುವಷ್ಟರಲ್ಲಿ ಜಗ್ಗೇಶ್ ಬಂದು ನನಗೆ ಹೊಡೆದರು ಅನ್ನೋದು ರವಿಕುಮಾರ್ ವಾದ.

ಜಗ್ಗೇಶ್ ಪ್ರಕಾರ, ವಿವಾದ ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗಿದೆ. ಅವರು ವಿಡಿಯೋವನ್ನು ವೈರಲ್ ಮಾಡಿದವರ ವಿರುದ್ಧ ಸೈಬರ್ ಕ್ರೈಂಗೆ ದೂರು ಕೊಡುವ ಚಿಂತನೆಯಲ್ಲಿದ್ದಾರೆ.

#

Ayushmanbhava Movie Gallery

Damayanthi Audio and Trailer Launch Gallery