ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಅನ್ನೋ ಆರೋಪವನ್ನು ಇತ್ತೀಚೆಗೆ ಹಲವು ನಟಿಯರು ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ. ನಿಮಗೆ ಇಂತಹ ಅನುಭವ ಆಗಿದೆಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ನಟಿ ಕೃತಿ ಅವರಿಗೂ ಎದುರಾಗಿದೆ. ಆಗ ಅವರು ನೀಡಿರುವ ಉತ್ತರ ಇದು.
ನನ್ನ ಹತ್ತಿರ ಯಾರಾದರೂ ಆ ರೀತಿ ವರ್ತಿಸಿದ್ರೆ, ಕೊಂದೇ ಬಿಡ್ತೀನಿ.
ಇಂತಹ ವಿಚಾರದಲ್ಲಿ ಸುಮ್ಮನಿರೋಕೆ ಸಾಧ್ಯವಿಲ್ಲ. ನಾನಂತೂ ಸುಮ್ಮನಿರುವುದಿಲ್ಲ. ಕಾಸ್ಟಿಂಗ್ ಕೌಚ್ ಅನ್ನೋದು ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ. ಕಾರ್ಪೊರೇಟ್ ರಂಗದಲ್ಲೂ ಇದೆ ಎನ್ನುವ ಕೃತಿ ಕರಬಂಧ, ನನಗೆ ಅಂತಹ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದು ಕೂಡಾ ಹೇಳ್ತಾರೆ.
ಇಡೀ ಸಮಸ್ಯೆಗೆ ಮಹಿಳೆಯರಷ್ಟೇ ಕಾರಣ ಅನ್ನೋದನ್ನು ನಾನು ಒಪ್ಪೋದಿಲ್ಲ. ಮಹಿಳೆಯರೂ ಇದನ್ನು ಸಾಕಷ್ಟು ದುರುಪಯೋಗ ಮಾಡಿಕೊಳ್ತಾರೆ. ಹೆಣ್ಣು ಎಂಬ ಕಾರಣಕ್ಕೆ ನಂಬುವುದೂ ತಪ್ಪಾಗಬಹುದು ಎನ್ನುತ್ತಾರೆ ಕೃತಿ ಕರಬಂಧ.
ಕೃತಿ ನಟಿಸಿರುವ ದಳಪತಿ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ.