ಮಕ್ರ್ಯುರಿ, 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಮೂಕಿ ಚಿತ್ರ. ಪ್ರಭುದೇವ ನಾಯಕರಾಗಿರುವ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಓದಿದ ಐವರು ಗೆಳೆಯರು ಹಲವು ವರ್ಷಗಳ ನಂತರ ಒಟ್ಟಿಗೇ ಸೇರುತ್ತಾರೆ. ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತೆ. ಅಲ್ಲಿಂದ ಶುರುವಾಗುತ್ತೆ ಮಕ್ರ್ಯುರಿ ಥ್ರಿಲ್ಲರ್. ಕ್ಷಣ ಕ್ಷಣವೂ ಕುತೂಹಲ ಹುಟ್ಟಿಸುವ ಚಿತ್ರದಲ್ಲಿ ಸಂಭಾಷಣೆಗಳಿಲ್ಲ.
ಚಿತ್ರದಲ್ಲಿ ಪ್ರಭುದೇವ ಮುಖ್ಯಪಾತ್ರದಲ್ಲಿದ್ದಾರೆ. ಕಾರ್ತಿಕೇಯನ್, ಸಂತಾನಂ, ಜಯಂತಿಲಾಲ್ ಗಡ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜು ಚಿತ್ರದ ನಿರ್ದೇಶಕ.
ವೆನ್ ಲೈಫ್ ಈಸ್ ಅಟ್ ವಾರ್, ದಿ ಮೋಸ್ಟ್ ಪವರ್ಫುಲ್ ಸ್ಕೀಮ್ ಈಸ್ ಸೈಲೆನ್ಸ್ ಅನ್ನೋದು ಚಿತ್ರದ ಟ್ಯಾಗ್ಲೈನ್. ಜೀವನವೇ ಯುದ್ಧವಾಗಿರುವ ಸಮಯದಲ್ಲಿ ಮೌನವೇ ಅತಿ ದೊಡ್ಡ ಎದುರಾಳಿ ಎನ್ನುವ ಅರ್ಥವಿದೆ. ಟೀಸರ್ನಲ್ಲಿ ಸಂತೋಷ್ ನಾರಾಯಣನ್ ಹಿನ್ನೆಲೆ ಸಂಗೀತ ಹಾಗೂ ತಿರುನವುಕ್ಕರಸು ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತಿದೆ. ಹಾಲಿವುಡ್ ಫೀಲ್ ಕೊಡುತ್ತಿರುವ ಚಿತ್ರ, ಮುಂದಿನ ವಾರ ಪಾದರಸದಂತೆಯೇ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ.