ಕೆಜಿಎಫ್ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಒಂದು ವರ್ಷದಿಂದ ನಡೆಯುತ್ತಿರುವ ಶೂಟಿಂಗ್ ಈಗ ಫೈನಲ್ ಸ್ಟೇಜ್‍ನಲ್ಲಿದೆ. ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್‍ನಲ್ಲಿ ಸೆಟ್‍ವೊಂದನ್ನು ಹಾಕಲಾಗಿದೆ. ಆ ಸೆಟ್‍ನಲ್ಲಿ ನಡೆಯೋದು ಯಶ್ ಇಂಟ್ರೊಡಕ್ಷನ್ ಸಾಂಗ್‍ನ ಶೂಟಿಂಗ್. ಅದೊಂದು ಮುಗಿದರೆ ಚಿತ್ರೀಕರಣ ಮುಗಿದಂತೆಯೇ ಲೆಕ್ಕ.
ಆರಂಭದಿಂದ ಅಂತ್ಯದವರೆಗೆ ಚಿತ್ರದ ಕುರಿತು ನಿಗೂಢತೆಗಳನ್ನೇ ಕಾಪಾಡಿಕೊಂಡು ಬಂದ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರೀಕರಣವನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಚಿತ್ರದಲ್ಲಿ 80ರ ದಶಕದ ಕಥೆ ಇದೆ. ಆದರೆ, ಇದು ಉಗ್ರಂ ಸ್ಟೈಲಿನ ಕಥೆ ಅಲ್ಲ ಅನ್ನೋದು ಪ್ರಶಾಂತ್ ನೀಲ್ ಮಾತು.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ಅನಂತ್‍ನಾಗ್, ರಮ್ಯಾಕೃಷ್ಣ ಮೊದಲಾದ ಹಿರಿಯರೇ ಪೋಷಕ ಪಾತ್ರಗಳಲ್ಲಿರುವುದು ವಿಶೇಷ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಭಾರಿ ಬಜೆಟ್ಟಿನ, ಅದ್ದೂರಿ ಚಿತ್ರವಾಗುತ್ತಿದೆ.