ರಾಜರಥ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ರಾಜರಥ ಚಿತ್ರದ `ಕ.. ...ಕ್ಳು' ವಿವಾದದ ಬಗ್ಗೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನನಗೆ ಅದು ಅಷ್ಟು ಕೆಟ್ಟ ಪದ ಎಂಬುದು ಗೊತ್ತಿರಲಿಲ್ಲ. ನಾನು ಇನ್ನೂ ಈಗ ಕನ್ನಡ ಕಲಿಯುತ್ತಿದ್ದೇನೆ. ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ.
ಆವಂತಿಕಾ ಶೆಟ್ಟಿ ಮೂಲತಃ ಕನ್ನಡದವರೇ ಆದರೂ, ಹುಟ್ಟಿ ಬೆಳೆದಿರುವುದು ಮುಂಬೈನಲ್ಲಿ. ಹೀಗಾಗಿ ಈಗ ಕನ್ನಡ ಕಲಿಯುತ್ತಿರುವ ಆವಂತಿಕಾ ಶೆಟ್ಟಿ, `ಕ.. ...ಕ್ಳು' ಡೈಲಾಗ್‍ಗೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ವಿವಾದಗಳು ಆಗುವುದಿಲ್ಲ. ಗೊತ್ತಿಲ್ಲದೆ ಆದ ತಪ್ಪನ್ನು ಮನ್ನಿಸಿಬಿಡಿ. ಇದೀಗ ತಾನೆ ಬೆಳೆಯುತ್ತಿರುವ ನಮ್ಮನ್ನು ಹರಸಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.