ಯಾವ ಧ್ವನಿಯನ್ನೂ ಹಿಂಬಾಲಿಸಬಾರದು.. ಇದು ಜಯಮಹಲ್ ಚಿತ್ರದ ಟ್ಯಾಗ್‍ಲೈನ್. ಏನು ಹಾಗಂದ್ರೆ ಅಂದ್ರೆ ಚಿತ್ರತಂಡ ಕೊಡುವ ರಿಯಾಕ್ಷನ್ನೇ ಭಯ ಹುಟ್ಟಿಸುವಂತಿರುತ್ತೆ. ಅದನ್ನು ಹೇಳಿಬಿಟ್ಟರೆ ಇಡೀ ಚಿತ್ರದ ಕಥೆಯನ್ನೇ ಹೇಳಿದ ಅನ್ನೋ ಹಾಗೆ ಅನ್ನೋದು ಚಿತ್ರತಂಡದ ವಾದ. ನಿರ್ದೇಶಕ ಹೃದಯ ಶಿವ ಅವರಂತೂ ಇಡೀ ಚಿತ್ರತಂಡಕ್ಕೆ ಟ್ಯಾಗ್‍ಲೈನ್ ಬಗ್ಗೆ ಮಾತನಾಡದಂತೆ ಕಟ್ಟಿಹಾಕಿಬಿಟ್ಟಿದ್ದಾರೆ.
ಸಿನಿಮಾದಲ್ಲಿ ನಡೆಯುವುದು ಎರಡು ಕಾಲಘಟ್ಟದ ಕಥೆ. ರಾಜಮನೆತನದಲ್ಲಿ ನಡೆಯುವ ಎರಡು ಕಾಲಘಟ್ಟದ ಕಥೆಯಲ್ಲಿ, ಪುರಾತನ ರಾಯಲ್ ಮನೆತನದವರಾಗಿ ಕಾಣಿಸಿಕೊಳ್ಳೋದು ಕೌಸಲ್ಯಾ. ಈ ಕಾಲಘಟ್ಟದ ರಾಣಿಯಾಗಿ ಬರೋದು ಶುಭಾ ಪೂಂಜಾ. ನೀನಾಸಂ ಅಶ್ವತ್ಥ್, ಮಾತಂಗಿ ಅವತಾರಿ.
ಟ್ಯಾಗ್‍ಲೈನ್‍ಗೆ ತಕ್ಕಂತೆ ಚಿತ್ರದ ದೃಶ್ಯ ಹಾಗೂ ಶಬ್ಧವೇ ಭಯ ಹುಟ್ಟಿಸುತ್ತೆ. ಇದುವರೆಗೆ ನಾನು ಮಾಡಿದ್ದು ಬಹುತೇಕ ಬಬ್ಲಿ ಹಾಗೂ ಗ್ಲಾಮರಸ್ ಪಾತ್ರಗಳು. ಇದೇ ಮೊದಲ ಬಾರಿಗೆ ಹಾರರ್ ಪಾತ್ರದಲ್ಲಿ ನಟಿಸಿದ್ಧೇನೆ. ಚಿತ್ರದ ಬಗ್ಗೆ ನಿಮ್ಮಷ್ಟೇ ಕುತೂಹಲ ನನಗೂ ಇದೆ. ಚಿತ್ರದ ಸಂಗೀತ ಖಂಡಿತಾ ನಿಮ್ಮನ್ನು ಮೋಡಿ ಮಾಡಲಿದೆ ಎಂಬ ಭರವಸೆ ಕೊಟ್ಟಿರೋದು ನಾಯಕಿ ಶುಭಾ ಪೂಂಜಾ.