ಕೃತಿ ಕರಬಂಧ ಎಂದರೆ ತಕ್ಷಣ ನೆನಪಾಗೋದು ಆಕೆಯ ನಗು. ಅದರಲ್ಲೂ ಗೂಗ್ಲಿಯಲ್ಲಿ ಆಗಾಗ್ಗೆ ತಲೆ ಕೂದಲನ್ನು ಹಿಂದಕ್ಕೆ ಸರಿಸುತ್ತಾ ಯಶ್‍ರನ್ನು ಕಾಡುವ ಸ್ಟೈಲು. ಅದಾದ ಮೇಲೆ ಕೃತಿ ಕರಬಂಧ ಕನ್ನಡದ ಹಲವು ಸ್ಟಾರ್‍ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ನಗು, ಸೌಂದರ್ಯಕ್ಕೆ ಹೆಸರಾದ ಕೃತಿ ಕರಬಂಧ ಇದೇ ಮೊದಲ ಬಾರಿಗೆ ರೌಡಿಯಾಗಿದ್ದಾರೆ.
ಕೃತಿ ಕರಬಂಧ ರೌಡಿಯಾಗಿರೋದು ದಳಪತಿ ಚಿತ್ರದಲ್ಲಿ. ಸಿನಿಮಾದಲ್ಲಿ ಕೃತಿ ಕರಬಂಧ ಅವರದ್ದು ಕಾಲೇಜು ಕಾರಿಡಾರ್‍ನಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್ ರೌಡಿಯ ಪಾತ್ರ. ಪಾತ್ರವನ್ನು ನಿರ್ದೇಶಕ ಪ್ರಶಾಂತ್ ರಾಜ್ ಸ್ಟೈಲಿಶ್ ಆಗಿ ತೆರೆಗೆ ತಂದಿದ್ದಾರೆ. ಇನ್ನು ಪ್ರೇಮ್ ಅವರ ಜೊತೆ ನಟಿಸಿದ ಕಾರಣ, ನನ್ನ ಕನ್ನಡ ಸುಧಾರಿಸಿದೆ. ಪ್ರೇಮ್ ತುಂಬಾ ಒಳ್ಳೆಯ ಕನ್ನಡ ಮಾತನಾಡ್ತಾರೆ. ಹೀಗಾಗಿ ರಿಹರ್ಸಲ್ ಮಾಡಿ ಮಾಡಿ ಇನ್ನೊಂದಿಷ್ಟು ಕನ್ನಡ ಕಲಿತಿದ್ದೇನೆ ಎಂದಿದ್ದಾರೆ ಗೂಗ್ಲಿ ಬ್ಯೂಟಿ.
ಸದ್ಯಕ್ಕೆ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗ ಹಾಗೂ ಬಾಲಿವುಡ್‍ನಲ್ಲೂ ಸರಿದಾಡುತ್ತಿರುವ ಚೆಲುವೆ, ಕನ್ನಡದಲ್ಲಿಯೇ ಗುರುತಿಸಿಕೊಂಡೆ. ಆದರೆ, ಇತ್ತೀಚೆಗೆ ಕನ್ನಡ ಚಿತ್ರರಂಗದಿಂದ ಯಾರೂ ಅಪ್ರೋಚ್ ಮಾಡುತ್ತಿಲ್ಲ. ನನಗೆ ಈಗಲೂ ಕನ್ನಡದಲ್ಲಿ ಹೆಚ್ಚು ಹೆಚ್ಚು ನಟಿಸುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಎರಡು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕೃತಿ, ತೆಲುಗು ಚಿತ್ರವೊಂದರಲ್ಲೂ ನಟಿಸುತ್ತಿದ್ದಾರಂತೆ.