ನಟ ಸಾರ್ವಭೌಮ ಎಂದರೆ ಡಾ.ರಾಜ್‍ಕುಮಾರ್. ನಟ ಭೈರವ ಎಂದರೆ ವಜ್ರಮುನಿ. ನಟಶೇಖರ ಎಂದರೆ ಕಲ್ಯಾಣ್‍ಕುಮಾರ್. ನಟಭಯಂಕರ ಎಂದರೆ ಪ್ರಥಮ್. ಹೌದು, ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ನಟಭಯಂಕರರಾಗುತ್ತಿದ್ದಾರೆ. ನಿಮಗೆ ನೆನಪಿರಬೇಕು. ಇತ್ತೀಚೆಗೆ ಪ್ರಥಮ್ ಅಭಿನಯದ
`ಪ್ರಥಮ್ ಬಿಲ್ಡಪ್' ಹೆಸರಿನ ಚಿತ್ರವೊಂದು ಶುರುವಾಗಿತ್ತು. ಈಗ ಚಿತ್ರದ ಟೈಟಲ್ ಬದಲಾಗಿದೆ. ಚಿತ್ರಕ್ಕೆ ನಟಭಯಂಕರ ಎಂದು ಟೈಟಲ್ ಇಡಲಾಗಿದೆ. ಅಲ್ಲಿಗೆ ಬಿಗ್‍ಬಾಸ್ ಪ್ರಥಮ್, ಒಳ್ಳೆಯ ಹುಡುಗ ಪ್ರಥಮ್... ನಟ ಭಯಂಕರ ಪ್ರಥಮ್ ಆಗಲಿದ್ದಾರೆ.