` ತಮಾಷೆಯಾಗಿಯೇ ಹುಟ್ಟಿತ್ತು ಕಾಮಿಡಿ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nanjundi kalyana's interesting story
Shravya, Thanush, Kuri Prathap Image From Nanjundi Kalyana

ನಂಜುಂಡಿ ಕಲ್ಯಾಣ. ಇದೇ ವಾರ ತೆರೆಗೆ ಬರುತ್ತಿರುವ ಹಾಸ್ಯಮಯ ಚಿತ್ರ. ಚಿತ್ರಕ್ಕೆ ತನುಷ್ ನಾಯಕ ಮತ್ತು ನಿರ್ಮಾಪಕ. ನಿರ್ದೇಶಕ ರಾಜೇಂದ್ರ ಕಾರಂತ್. ನಾಯಕಿಯಾಗಿ ನಟಿಸಿರುವುದು ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ. ಇಡೀ ಚಿತ್ರದಲ್ಲಿ ನಗೆಯ ಹೋಳಿಗೆಯೇ ಇದೆ ಅನ್ನೋದು ಚಿತ್ರತಂಡದ ಭರವಸೆ. ಚಿತ್ರ ನೋಡಿ ನಗದೇ ಇದ್ದವರಿಗೆ 1 ಲಕ್ಷ ಬಹುಮಾನ ಕೊಡುತ್ತೇವೆ ಎನ್ನುತ್ತಿದೆ ಚಿತ್ರತಂಡ.

ಅಂದಹಾಗೆ ಈ ಚಿತ್ರ ಹುಟ್ಟಿದ ಕಥೆಯೇ ಸ್ವಾರಸ್ಯವಾಗಿದೆ. ತಮಾಷೆಯಾಗಿ ಶುರುವಾದ ಸಂಭಾಷಣೆ ಸಿನಿಮಾ ಆಗಿದೆ. ತನುಷ್ ಈ ಹಿಂದೆ ಮಡಮಕ್ಕಿ ಚಿತ್ರದಲ್ಲಿ ನಟಿಸಿದ್ದವರು. ಆ ಚಿತ್ರದಲ್ಲಿ ನಿರ್ದೇಶಕ ರಾಜೇಂದ್ರ ಕಾರಂತ್ ಕೂಡಾ ಇದ್ದರು. ಅವರನ್ನು ತನುಷ್, ತಮ್ಮ ಗುರು ಎಂದೇ ಕರೆಯುತ್ತಾರೆ. ಒಂದ್ಸಲ ಹೀಗೇ ಮಾತನಾಡುವಾಗ ರಾಜೇಂದ್ರ, ಸಲಿಂಗಿಗಳ ಮದುವೆಯ ಕಥೆಯ ಎಳೆಯೊಂದನ್ನು ಹೇಳಿದ್ರು. ನಾನೂ ತಮಾಷೆಗಾಗಿ ಕಥೆ ಚೆನ್ನಾಗಿದೆ. ನಂಜುಂಡಿ ಕಲ್ಯಾಣ ಅನ್ನೋ ಟೈಟಲ್ ಇಡೋಣ ಎಂದೆ. ನಾನು ಹೇಳಿದ್ದು ತಮಾಷೆಗೆ. ಆದರೆ, ರಾಜೇಂದ್ರ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡರಷ್ಟೇ ಅಲ್ಲ, ರಾಘವೇಂದ್ರ ರಾಜ್‍ಕುಮಾರ್ ಬಳಿ ಹೋಗಿ ನಂಜುಂಡಿ ಕಲ್ಯಾಣ ಟೈಟಲ್‍ನಲ್ಲಿ ಮತ್ತೆ ಸಿನಿಮಾ ಮಾಡುತ್ತೇವೆ ಎಂದು ಹೇಳಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡುಬಿಟ್ಟರು. ಚಿತ್ರ ಶುರುವಾಗಿದ್ದು ಹಾಗೆ.

ಇದು ನಿಜಕ್ಕೂ ರಿಸ್ಕೀ ಸಬ್ಜೆಕ್ಟ್. ಜನ ಹೇಗೆ ಒಪ್ಪಿಕೊಳ್ತಾರೆ ಅನ್ನೋ ಭಯ ನಮಗೂ ಇದೆ. ಆದರೆ, ಎಲ್ಲಿಯೂ ಅಶ್ಲೀಲತೆಯಿಲ್ಲ. ಚಿತ್ರ ಶುರುವಿಂದ ಕೊನೆಯವರೆಗೆ ಮಜವಾಗಿ ನೋಡಿಸಿಕೊಂಡು ಹೋಗುತ್ತೆ. 2018ರ ಯೂತ್‍ಫುಲ್ ಸಿನಿಮಾ ಇದು. ಥಿಯೇಟರ್‍ನಿಂದ ಹೊರಬರುವಾಗ ಪ್ರತಿಯೊಬ್ಬರೂ ನಗು ನಗುತ್ತಾ ಬರುತ್ತಾರೆ ಅನ್ನೋ ಭರವಸೆ ಕೊಡ್ತಾರೆ ತನುಷ್. 

Shivarjun Movie Gallery

Popcorn Monkey Tiger Movie Gallery