ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳ ಸಕ್ಸಸ್ ನಂತರ ಗುರುನಂದನ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಮಂಜು ಸ್ವರಾಜ್ ನಿರ್ದೇಶನದ ಚಿತ್ರ. ಕಥೆ ಓಕೆ ಆಗಿದೆ. ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ರಾಜು ಕನ್ನಡ ಮೀಡಿಯಂ ನಂತರ ಗುರುನಂದನ್ ಅವರ ಬಳಿ ಹಲವು ನಿರ್ಮಾಪಕರು ಬಂದಿದ್ದಾರೆ. ಆದರೆ, ಬಂದವರೆಲ್ಲ ರೀಮೇಕ್ ಚಿತ್ರಗಳನ್ನೇ ಹಿಡಿದು ತಂದಿದ್ದಾರೆ. ಆದರೆ, ಸ್ವಮೇಕ್ ಕಥೆಯನ್ನೇ ಮಾಡೋಣ ಎಂದು ನಿರ್ಧರಿಸಿ ಎಲ್ಲವನ್ನೂ ತಿರಸ್ಕರಿಸಿದೆ. ಮಂಜು ಸ್ವರಾಜ್ ಅವರ ಕಥೆ ಇಷ್ಟವಾಯ್ತು ಎಂದಿದ್ದಾರೆ ಗುರುನಂದನ್.
ಮಂಜು ಸ್ವರಾಜ್ ಚಿತ್ರದ ಜೊತೆ ಜೊತೆಯಲ್ಲೇ ಮತ್ತೊಂದು ಸಿನಿಮಾ ಶುರುವಾಗಲಿದೆ. ಆ ಚಿತ್ರ ಫೈನಲ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟ ಮಾಹಿತಿ ನೀಡಲಿದ್ದೇನೆ ಎಂದಿದ್ದಾರೆ ಗುರು. ಅದರ ನಂತರ ಮತ್ತೊಮ್ಮೆ ರಾಜು ಕನ್ನಡ ಮೀಡಿಯಂ ನಿರ್ದೇಶಕರ ಜೊತೆ ಇನ್ನೊಂದು ಸಿನಿಮಾ ಮಾಡಲಿದ್ದಾರಂತೆ.