ದಳಪತಿ. ಹಾಗೆಂದ ಕೂಡಲೇ ಯುದ್ಧ, ರಣರಂಗ, ಫೈಟು ನೆನಪಾದರೆ ಆಶ್ಚರ್ಯವಿಲ್ಲ. ಏಕೆಂದರೆ, ಹೆಸರೇ ಅಂಥದ್ದು. ಆದರೆ, ಆ ಸಿನಿಮಾದಲ್ಲಿರುವು ಲವ್ಲೀ ಸ್ಟಾರ್ ಪ್ರೇಮ್ ಎಂದರೆ, ಏನಂತೆ ಸ್ಟೋರಿ ಅಂತಾರೆ ಅಭಿಮಾನಿಗಳು. ಡೈರೆಕ್ಟರ್ ಪ್ರಶಾಂತ್ ರಾಜ್ ಅಂದ್ರೆ, ಬಿಡು ಗುರು, ಲವ್ ಸ್ಟೋರಿನೇ ಇರುತ್ತೆ ಅಂತಾರೆ. ಅಷ್ಟರಮಟ್ಟಿಗೆ ಪ್ರೇಮ್ ಮತ್ತು ಪ್ರಶಾಂತ್ ರಾಜ್ ಕಾಂಬಿನೇಷನ್ ದಳಪತಿಯಲ್ಲೂ ಹುಸಿಯಾಗಿಲ್ಲ.
ಇವನು ಪ್ರೀತಿಗೆ ದಳಪತಿ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಖುಷಿಯ ಕಥೆ ಹೇಳಬೇಕು. ಗೋಳಿನ ಕಥೆ ನನಗೆ ಇಷ್ಟವಾಗಲ್ಲ. ಕಲರ್‍ಫುಲ್ ಲವ್‍ಸ್ಟೋರಿ ಇರಬೇಕು ಅನ್ನೋದು ಪ್ರಶಾಂತ್ ರಾಜ್ ಕನಸು.
ಲವ್‍ಗುರು, ಜೂಮ್‍ನಂತಹ ಚಿತ್ರ ಕೊಟ್ಟಿರುವ ಪ್ರಶಾಂತ್ ರಾಜ್, ಇಲ್ಲೂ ಒಂದು ಲವ್ ಸ್ಟೋರಿ ಹೇಳಿದ್ದಾರೆ. ಆದರೆ, ಸಂಪೂರ್ಣ ವಿಭಿನ್ನ ಶೈಲಿಯ ಸಿನಿಮಾ. ಕ್ಲಾಸ್ ಮತ್ತು ಮಾಸ್ ಎರಡೂ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯ ಕಥೆ ಚಿತ್ರದಲ್ಲಿದೆ ಎಂಬ ಭರವಸೆ ನಿರ್ದೇಶಕರದ್ದು. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೊಂದು ವಾರ ಕಾಯಿರಿ.