` ಕುಮಾರಸ್ವಾಮಿ-ಸುದೀಪ್ 2 ಗಂಟೆ ಮಾತುಕತೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep meets hdk
Sudeep meets HD Kumaraswamy

ರಾಜ್ಯ ರಾಜಕೀಯದಲ್ಲಿ ಎಲೆಕ್ಷನ್ ಬಿರುಗಾಳಿ ಬೀಸುವ ಮೊದಲೇ ಕುಮಾರಸ್ವಾಮಿ, ಸುದೀಪ್ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಕುಮಾರಸ್ವಾಮಿಯವರಿಗೆ ಸುದೀಪ್ ಅಡುಗೆ ಮಾಡಿ ಬಡಿಸಿ, ಅತಿಥಿ ಸತ್ಕಾರ ತೋರಿಸಿದ್ದರು. ಅದಾದ ನಂತರ ಸುದೀಪ್, ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಕಿಚ್ಚಿನಂತೆ ಹುಟ್ಟಿಕೊಂಡಿತ್ತು. ಆದರೆ, ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಮತ್ತೊಮ್ಮೆ ಹೇಳುವ ಮೂಲಕ ಸುದ್ದಿಯ ಕಿಚ್ಚಿಗೆ ಫುಲ್‍ಸ್ಟಾಪ್ ಇಟ್ಟಿದ್ದರು ಸುದೀಪ್.

ಈಗ ಮತ್ತೊಮ್ಮೆ ಅಂಥಾದ್ದೇ ಸುದ್ದಿ ತೇಲಿ ಬರುತ್ತಿದೆ. ಎಲೆಕ್ಷನ್ ಘೋಷಣೆಯಾಗಿರುವ ಈ ಸಮಯದಲ್ಲಿ ಸುದೀಪ್ ಸ್ವತಃ ಕುಮಾರಸ್ವಾಮಿಯವರ ಮನೆಗೆ ಹೋಗಿ ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಮೂಡಿಸಿದೆ. ಅದರಲ್ಲೂ ಸುದೀಪ್ 2 ಗಂಟೆ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.

ಸುದೀಪ್ ಎಷ್ಟು ಬಾರಿ ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರೂ, ಅವರು ಪ್ರತಿಯೊಬ್ಬ ರಾಜಕೀಯ ನಾಯಕರನ್ನು ಭೇಟಿ ಮಾಡಿದಾಗ ಇಂಥ ಸುದ್ದಿ, ತಳಮಳಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಏಕೆಂದರೆ, ಅದು ಸಿನಿಮಾ ಅಲ್ಲ. ರಾಜಕೀಯ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery