` ಬ್ಯುಸಿಯಾದರು ಮಯೂರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mayuri busy again
Mayuri Image

ಮಯೂರಿ. ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಬಂದ ಚೆಲುವೆ. ಅಭಿನಯಿಸಿದ ಮೊದಲ ಸಿನಿಮಾ ಕೃಷ್ಣಲೀಲಾ. ಆ ಸಿನಿಮಾ ಸೂಪರ್ ಹಿಟ್ ಆದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಕಳೆದ ವರ್ಷ ಮಯೂರಿ ಅವರ ಕರಿಯಾ2 ಬಿಟ್ಟರೆ ಬೇರೆ ಸಿನಿಮಾ ಬರಲಿಲ್ಲ. ಆದರೆ, ಈ ವರ್ಷ ಹಾಗಿರೋದಿಲ್ಲ. ಮಯೂರಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ.

ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಚಿತ್ರದ ಇಬ್ಬರು ನಾಯಕಿಯರಲ್ಲಿ ಮಯೂರಿ ಒಬ್ಬರು. ನನ್ನ ಪ್ರಕಾರ ಸಿನಿಮಾ ಚಿತ್ರೀಕರಣದಲ್ಲಿದ್ದರೆ, 8ಎಂಎಂ ಚಿತ್ರದ ಚಿತ್ರೀಕರಣ ಮುಗಿದು ಎಡಿಟಿಂಗ್ ಟೇಬಲ್ ಮೇಲಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಶೂಟಿಂಗ್ ಕೂಡಾ ಮುಗಿದಿದೆ.

ಶುರುವಾಗಬೇಕಿರುವುದು ರುಸ್ತುಂ ಹಾಗೂ ಮೌನಂ ಚಿತ್ರಗಳು. ಒಳ್ಳೊಳ್ಳೆಯ ಅವಕಾಶಗಳು ಬರುತ್ತಿವೆ. ಆದರೆ, ಪರ್ಫಾರ್ಮೆನ್ಸ್‍ಗೆ ಅವಕಾಶ ಇರುವ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತಿದ್ದೇನೆ. ಪಾತ್ರ ಚೆನ್ನಾಗಿರಬೇಕು ಅಷ್ಟೆ ಎಂದಿದ್ದಾರೆ ಮಯೂರಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery