ಕಡ್ಡಿಪುಡಿ ಚಿತ್ರ ತೆಲುಗಿಗೆ ರೀಮೇಕ್ ಆಗಲಿದೆಯಾ..? ಆ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶಕ ಮಾಡಲಿದ್ದಾರಾ..? ನಾಗಾರ್ಜುನ, ಶಿವರಾಜ್ ಕುಮಾರ್ ಪಾತ್ರವನ್ನು ನಿರ್ವಹಿಸಲಿದ್ದಾರಾ..? ಇಂಥಾದ್ದೊಂದು ಸುದ್ದಿಗೆ ರೆಕ್ಕೆಪುಕ್ಕ ಸಿಕ್ಕಿದೆ.
ಇತ್ತೀಚೆಗೆ ರಾಮ್‍ಗೋಪಾಲ್ ವರ್ಮಾ, ಟಗರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಆಗ ವರ್ಮಾ ದುನಿಯಾ ಸೂರಿ ನಿರ್ದೇಶನದಲ್ಲಿ ತೆಲುಗಿನಲ್ಲಿ ಸಿನಿಮಾ ನಿರ್ಮಿಸುವ ಯೋಜನೆ ಪ್ರಕಟಿಸಿದ್ದಾರೆ. ಎಲ್ಲವೂ ಪಕ್ಕಾ ಆದರೆ, ನಾಗಾರ್ಜುನ ದುನಿಯಾ ಸೂರಿ ನಿರ್ದೇಶನದಲ್ಲಿ ನಟಿಸಲಿದ್ದಾರೆ.
ಕಡ್ಡಿಪುಡಿ ಸೂರಿ ನಿರ್ದೇಶನದ ಸಿನಿಮಾ. ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವರ್ಮಾರಂತಹ ನಿರ್ದೇಶಕ ನನ್ನ ಸಿನಿಮಾ ಮೆಚ್ಚಿಕೊಂಡಿರುವುದು ಖುಷಿಯ ವಿಚಾರ. ನಾಗಾರ್ಜುನ ಡೇಟ್ಸ್ ಕೊಡಿಸಿದರೆ, ತೆಲುಗಿನಲ್ಲಿ ಕಡ್ಡಿಪುಡಿ ಸಿನಿಮಾ ಮಾಡೋದಾಗಿ ವರ್ಮಾಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ ದುನಿಯಾ ಸೂರಿ.