` ರಚಿತಾಗೆ ಮತ್ತೆ ಅಮ್ಮನಾದರು ಮಧುಬಾಲಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
roja actress madhoo
Madhoo In Seetharama Kalyana

ಭಾರತೀಯ ಚಿತ್ರರಂಗದವರಿಗೆ ಮಧುಬಾಲಾ ಎಂದರೆ ರೋಜಾ ನೆನಪಾಗುತ್ತೆ. ಆದರೆ, ಕನ್ನಡ ಚಿತ್ರರಸಿಕರಿಗೆ ಅಣ್ಣಯ್ಯ ಚಿತ್ರದ ಬೊಂಬೆ.. ಬೊಂಬೆ ಹಾಡು ನೆನಪಾಗುತ್ತೆ. ಇತ್ತೀಚೆಗೆ ಮಧುಬಾಲಾರನ್ನು ಕಿಚ್ಚ ಸುದೀಪ್ ಕನ್ನಡಕ್ಕೆ ಕರೆತಂದಿದ್ದರು. ರನ್ನ ಚಿತ್ರದಲ್ಲಿ ರಚಿತಾರಾಮ್-ಹರಿಪ್ರಿಯಾಗೆ ತಾಯಿಯಾಗಿ ನಟಿಸಿದ್ದರು ಮಧುಬಾಲಾ. 

ಈಗ ಮತ್ತೊಮ್ಮೆ ಬಂದಿದ್ದಾರೆ ಮಧುಬಾಲಾ. ಈ ಬಾರಿಯೂ ಅವರಿಗೆ ಮಗಳಾಗಿರೋದು ರಚಿತಾರಾಮ್. ಸೀತಾರಾಮ ಕಲ್ಯಾಣ ಚಿತ್ರದಲ್ಲಿ. ನಿಖಿಲ್ ಕುಮಾರ್ ಅಭಿನಯದ ಈ ಸಿನಿಮಾದಲ್ಲಿ ಮಧುಬಾಲಾ ಅವರದ್ದು ಪ್ರಮುಖ ಪಾತ್ರವಂತೆ. ಹಲವು ದಿನಗಳ ಟೈಂ ತೆಗೆದುಕೊಂಡು ಕಥೆಗೆ ಒಪ್ಪಿದರು. ನಮಗೆ ಆ ಕಥೆ ಹಾಗೂ ಪಾತ್ರಕ್ಕೆ ಅವರೇ ಬೇಕಿತ್ತು ಎಂದಿದ್ದಾರೆ ನಿರ್ದೇಶಕ ಹರ್ಷ. ಮಧುಬಾಲಾಗೆ ಜೋಡಿಯಾಗಿರುವುದು ರವಿಶಂಕರ್.

Related Articles :-

Madhoo Joins 'Seetharama Kalayana'