ರಾಜರಥ. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಅಭಿನಯದ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಗಳು ವಿಭಿನ್ನವಾಗಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಅನೂಪ್. ಚಿತ್ರ ಇದೇ ಏಪ್ರಿಲ್ 7ನೇ ತಾರೀಕು ಯೂರೋಪ್‍ನಲ್ಲಿ ಬಿಡುಗಡೆಯಾಗುತ್ತಿದೆ. ಅಮೆರಿಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ ರಾಜರಥ.
ಇನ್ನು ಚಿತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಿದೆ ಎಂದು ನಿರ್ಧರಿಸಿರುವ ಚಿತ್ರತಂಡ, ಈ ವಾರದಿಂದಲೇ ರಥಯಾತ್ರೆ ಶುರು ಮಾಡುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ.. ಹೀಗೆ ಎಲ್ಲ ಕಡೆ ರಾಜರಥದ ಯಾತ್ರೆ ಶುರುವಾಗಲಿದೆ.
ಅಷ್ಟೇ ಅಲ್ಲ, ಚಿತ್ರದಲ್ಲಿ ಬಳಸಿರುವ ಬೈಕ್‍ನ್ನು ಅದೃಷ್ಟಶಾಲಿ ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ನೀವು ಸಿನಿಮಾ ನೋಡಿ ಬರುವಾಗ ಚಿತ್ರದ ಟಿಕೆಟ್ ಮೇಲೆ ನಿಮ್ಮ ಹೆಸರು, ನಂಬರ್ ಬರೆದು ಚಿತ್ರತಂಡ ಇಟ್ಟಿರುವ ಬಾಕ್ಸ್‍ನಲ್ಲಿ ಹಾಕಿ ಬನ್ನಿ. ಅದೃಷ್ಟ ಅದ್ಭುತವಾಗಿದ್ದರೆ, ನಿಮಗೆ ಆ ಬೈಕ್ ಸಿಗುತ್ತೆ.