` ರಾಗಿಣಿ ಸ್ಲಿಮ್ ಸೀಕ್ರೆಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini reveals her slimming secret
Ragini Dwivedi Image

ರಾಗಿಣಿ ದ್ವಿವೇದಿ. ಕನ್ನಡ ಚಿತ್ರರಂಗದ ಗ್ಲ್ಯಾಮರ್ ಕ್ವೀನ್. ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರುವ ರಾಗಿಣಿ, ಇತ್ತೀಚೆಗೆ ತುಸು ದಪ್ಪಗಾಗಿದ್ದರು. ಆದರೆ.. ಈಗೇನಾದರೂ ರಾಗಿಣಿಯನ್ನು ನೋಡಿಬಿಟ್ಟರೆ.. ಇವರು ಅವರೇನಾ ಎಂದು ಅನ್ನಿಸಿಬಿಡುತ್ತೆ. ರಾಗಿಣಿ ಅಭಿನಯದ ಮೊದಲ ಸಿನಿಮಾ ವೀರಮದಕರಿ ಚಿತ್ರದಲ್ಲಿರುಷ್ಟೇ ಸ್ಲಿಮ್ ಆಗಿದ್ದಾರೆ ರಾಗಿಣಿ. 

ಏನಿದು.. ರಾಗಿಣಿ ಸ್ಲಿಮ್ ಸೀಕ್ರೆಟ್..? ಆಪರೇಷನ್ ಮಾಡಿಸಿಕೊಂಡ್ರಾ ಅಂದ್ರೆ, ರಾಗಿಣಿ ಅವರದ್ದು ಒಂದೇ ಉತ್ತರ.. ನೋ ಚಾನ್ಸ್. ಅಂತಹವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ ಅಂತಾರೆ ರಾಗಿಣಿ. ಹಾಗಾದರೆ, ಹೇಗಾಯ್ತು ಇದೆಲ್ಲ ಅಂದಾಗ ರಾಗಿಣಿ ತಮ್ಮ ಸ್ಲಿಮ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ನಾನು ದಪ್ಪಗಾಗಿದ್ದುದು ನಿಜ. ಆದರೆ, ಅದನ್ನೂ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆದರೆ, ನನಗೇ ಏನೋ ಸಮಸ್ಯೆ ಅನ್ನಿಸೋಕೆ ಶುರುವಾಗಿತ್ತು. ಮೊದಲಿನಿಂದ ನಾನು ಅಥ್ಲೆಟ್‍ನಂತಿದ್ದವಳು. ಫಿಟ್‍ನೆಸ್ ಸಮಸ್ಯೆ ಅನ್ನಿಸೋಕೆ ಶುರುವಾದ ತಕ್ಷಣ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಂದಕ್ಕೆ ಹಾಕಿದೆ. ಒಬ್ಬ ನಟಿಯಾಗಿ ನಾನು ರಿಸ್ಕ್ ತೆಗೆದುಕೊಂಡಿದ್ದೆ. ಮೊದಲು ಹೋಗಿದ್ದು ಧರ್ಮಸ್ಥಳಕ್ಕೆ. ಅಲ್ಲಿನ ಪ್ರಾಕೃತಿಕ ಕೇಂದ್ರದಲ್ಲಿ 20 ದಿನ ಇದ್ದೆ. ನಂತರ ಮನೆಗೆ ಬಂದವಳು ಒಬ್ಬ ಟ್ರೈನರ್‍ನನ್ನು ನೇಮಿಸಿಕೊಂಡೆ. ಅವರು ನನಗೆ, ನನ್ನ ದೇಹಕ್ಕೆ ಹೊಂದಿಕೆಯಾಗುವ ವ್ಯಾಯಾಮ ಹೇಳಿಕೊಟ್ಟರು. 6 ತಿಂಗಳು ಹೊರಗೆ ಬರಲಿಲ್ಲ. ಊಟ ಮಾಡುವುದು ಮತ್ತು ಎಕ್ಸರ್‍ಸೈಜ್ ಮಾಡುವುದು.. ಈ ಎರಡನ್ನು ಬಿಟ್ಟು 6 ತಿಂಗಳು ಮತ್ತೇನನ್ನೂ ಮಾಡಲಿಲ್ಲ. ಈಗ ಹೀಗಾಗಿದ್ದೇನೆ... ಅಷ್ಟೆ ಎಂದಿದ್ದಾರೆ ರಾಗಿಣಿ.

Babru Teaser Launch Gallery

Odeya Audio Launch Gallery