ಚಿತ್ರನಟಿ ರಮ್ಯಾ ಈಗ ರಾಜಕಾರಣದಲ್ಲೇ ಫುಲ್ ಬ್ಯುಸಿ. ಚಿತ್ರರಂಗದಲ್ಲಿರುವಷ್ಟು ದಿನವೂ ಮೋಹಕ ತಾರೆ ಎಂಬ ಬಿರುದಿಗೆ ಪಾತ್ರರಾಗಿದ್ದ ರಮ್ಯಾ, ಈಗ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದಾರೆ. ರಮ್ಯಾ ಅವರ ಅಭಿನಯದ, ತೆರೆ ಕಂಡ ಕಟ್ಟಕಡೆಯ ಸಿನಿಮಾ ನಾಗರಹಾವು. ಅದೂ ಕೂಡಾ ರಾಜಕೀಯ ಸೇರುವ ಮುನ್ನ ನಟಿಸಿದ್ದ ಸಿನಿಮಾ.
ಸಂಸದೆಯಾದ ಮೇಲೆ ಚಿತ್ರರಂಗದಿಂದ ಹೆಚ್ಚೂ ಕಡಿಮೆ ದೂರ ಇರುವ ರಮ್ಯಾ, ಇನ್ನು ಮುಂದೆ ಮತ್ತೆ ಬಣ್ಣ ಹಚ್ಚೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ದೆಹಲಿಯಲ್ಲೇ ಇರುವ ರಮ್ಯಾ, ಮಂಡ್ಯದಲ್ಲೂ ಕಾಣಿಸಿಕೊಂಡಿಲ್ಲ. ರಾಹುಲ್ ಗಾಂಧಿ ಬಂದಾಗಲೂ ಮಂಡ್ಯಕ್ಕೆ ಬರಲಿಲ್ಲ.
ದೆಹಲಿಯಲ್ಲಿ ನನ್ನನ್ನು ಯಾರೂ ಗುರುತಿಸೋದಿಲ್ಲ. ಹೀಗಾಗಿ ನಾನು ದೆಹಲಿಯಲ್ಲಿ ನನ್ನ ಖಾಸಗಿ ಜೀವನ ಎಂಜಾಯ್ ಮಾಡ್ತೇನೆ. ಸಿನಿಮಾ ನೋಡುತ್ತಿದ್ದರೆ, ಇವಳು ನಾನೇನಾ ಎನ್ನಿಸುತ್ತೆ. ಇನ್ನು ಮತ್ತೆ ಮೇಕಪ್ ಮಾಡಿಕೊಳ್ಳೋ ಮಾತೇ ಇಲ್ಲ ಎಂದಿದ್ದಾರೆ ರಮ್ಯಾ.
ಸ್ಸೋ.. ಇನ್ನು ರಮ್ಯಾ ಅವರನ್ನು ಮಾಜಿ ಚಿತ್ರನಟಿ ಎನ್ನಬಹುದಾ..?