` ಜಯಂತಿ ಅನಾರೋಗ್ಯದಿಂದ ಚೇತರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
senior actor jayanthi recovering
Jayanthi Image

ಅಭಿನಯ ಶಾರದೆ ಜಯಂತಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯಂತಿ, ಅಸ್ತಮಾದಿಂದ ಬಳಲುತ್ತಿದ್ದಾರೆ. ಐಸಿಯುನಲ್ಲಿಟ್ಟುಕೊಂಡೇ ಚಿಕಿತ್ಸೆ ನೀಡುತ್ತಿರುವ ವಿಕ್ರಂ ಆಸ್ಪತ್ರೆ ವೈದ್ಯರು, ಯಾವುದೇ ಆತಂಕ ಇಲ್ಲ ಎಂದಿದ್ದಾರೆ. 

ನನ್ನ ತಾಯಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ ಪುತ್ರ ಕೃಷ್ಣಕುಮಾರ್.

ಜಯಂತಿ ಅಸ್ವಸ್ಥ ಎಂದು ಗೊತ್ತಾಗುತ್ತಿದ್ದಂತೆಯೇ ಹಿರಿಯ ನಟಿ ಬಿ.ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್, ಗಿರಿಜಾ ಲೋಕೇಶ್, ಹೇಮಾ ಚೌಧರಿ.. ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

I Love You Movie Gallery

Rightbanner02_butterfly_inside

Yaana Movie Gallery