ಜಾನಿ ಜಾನಿ ಯೆಸ್ ಪಪ್ಪಾ ಚಿತ್ರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಹೀರೋಯಿನ್ ಡಿಂಪಲ್ ಕ್ವೀನ್ ರಚಿತಾ ರಾಮ್. ಉಳಿದಂತೆ ಚಿತ್ರದಲ್ಲಿರುವುದು ಬಹುತೇಕ ಜಾನಿ ಮೇರಾ ನಾಮ್.. ಪ್ರೀತಿ ಮೇರಾ ಕಾಮ್ ಚಿತ್ರತಂಡ. ಹೀಗಾಗಿಯೇ ನಿರ್ದೇಶಕ ಪ್ರೀತಂ ಗುಬ್ಬಿ, ಈ ಚಿತ್ರದಲ್ಲೂ ಡಾ. ಹಾಲಪ್ಪನವರನ್ನ ಕರೆತಂದಿದ್ದಾರೆ.
ಮೇರಾ ನಾಮ್ನಂತೆಯೇ ಇಲ್ಲಿಯೂ ಡಾ. ಹಾಲಪ್ಪ ಅಲಿಯಾಸ್ ಸಾಧುಕೋಕಿಲ ಇರ್ತಾರೆ. ಅಲ್ಲಿನಂತೆಯೇ ಇಲ್ಲಿಯೂ ಚಿತ್ರ ವಿಚಿತ್ರವಾಗಿ ರೋಗಿಗಳಿಗೆ ತರಲೆ ಪ್ರಶ್ನೆ ಕೇಳ್ತಾರೆ. ಆದರೆ, ಅಲ್ಲಿ ಒಂದು ಡಿಫರೆನ್ಸ್ ಇದೆ ಅಂತಾರೆ ಪ್ರೀತಮ್.
ಸಾಧು ಅವರ ಪಾತ್ರಕ್ಕೆ ಡೈಲಾಗ್ ಬರೆಯುವಾಗ ನಿಜಕ್ಕೂ ತಲೆ ಕೆಟ್ಟು ಹೋಗಿತ್ತು. ಫನ್ನಿ ಫನ್ನಿ ಡೈಲಾಗ್ಗಳು, ಅಸಂಗತವಾಗಿರುವ ಸಂಭಾಷಣೆ ಬರೆಯೋದು ಅಷ್ಟು ಸುಲಭ ಅಲ್ಲ ಅಂತಾರೆ ಪ್ರೀತಮ್.
ಸಾಧು ತೆರೆ ಮೇಲೆ ಕಂಡರೆ ಸಾಕು, ಶಿಳ್ಳೆ ಹೊಡೆಯೋ ಅಭಿಮಾನಿಗಳಿದ್ದಾರೆ. ಇನ್ನು ಈ ಬಾರಿ ದುನಿಯಾ ವಿಜಯ್, ಸಾಧು, ರಂಗಾಯಣ ರಘು ಕಾಂಬಿನೇಷನ್. ಹೊಸ ಪದ್ಮಾವತಿ ಗ್ಲ್ಯಾಮರ್ರು.. ಸಿನಿಮಾವೊಂದು ಪ್ರೇಕ್ಷಕರನ್ನು ಸೆಳೆಯೋಕೆ ಏನೆಲ್ಲ ಇರಬೇಕೋ.. ಅದೆಲ್ಲವೂ ಈ ಸಿನಿಮಾದಲ್ಲಿದೆ.