ಸಿಂಧು ಲೋಕನಾಥ್... ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವಾಗಲೇ ದಿಢೀರನೆ ಮದುವೆಯಾದವರು. ಮದುವೆಯೇನೋ ಸಡನ್ ಆಗಿ ಆಯ್ತು. ಆದರೆ, ಹಾಗೆ ಆಗಿದ್ದೇ ಒಳ್ಳೆಯದಾಯ್ತು. ಚಿನ್ನದಂತಾ ಗಂಡ ಸಿಕ್ಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಸಿಂಧು. ಪತಿ ಶ್ರೇಯಸ್ ಸಿಂಧು ಅವರನ್ನು ತುಂಬಾ ಕೇರ್ ಮಾಡ್ತಾರಂತೆ. ಜೊತೆಗೆ ಸಿನಿಮಾದಲ್ಲಿ ಕಂಟಿನ್ಯೂ ಮಾಡೋಕೆ ಹೇಳಿದ್ದಾರಂತೆ. ಹೀಗಾಗಿ ಸಿಂಧು ತಾವೇ ನಿರ್ಮಾಪಕಿಯಾಗೋಕೆ ಮನಸ್ಸು ಮಾಡಿದ್ದಾರೆ.
`@ ದಿ ಏಜ್ 30' ಅನ್ನೋ ವೆಬ್ ಸರಣಿ ಚಿತ್ರ ಮಾಡುತ್ತಿರುವ ಸಿಂಧು, ಆ ಚಿತ್ರಕ್ಕೆ ತಾವೇ ನಿರ್ಮಾಪಕಿ. ತಾವೇ ನಾಯಕಿ. ಇದು 17 ನಿಮಿಷದ ಕಿರುಚಿತ್ರ. ವಿಕಾಸ್ ಎಂಬುವವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಥೆಯೂ ಸಿಂಧೂ ಅವರದ್ದೇ. ಕೇವಲ 1 ಲಕ್ಷ ರೂಪಾಯಿಯಲ್ಲಿ ನಿರ್ಮಿಸಿರುವ ಈ ಸಿನಿಮಾ ಆನ್‍ಲೈನ್ ಸಿಗುತ್ತೆ.