ನೆನಪಿರಲಿ ಪ್ರೇಮ್ ಅಭಿನಯದ ಚಿತ್ರ ದಳಪತಿ ಏಪ್ರಿಲ್ 13ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇದು ಪ್ರಶಾಂತ್ ನಿರ್ದೇಶನದ ಸಿನಿಮಾ. ಜೂಮ್ ನಂತರ ಪ್ರಶಾಂತ್ ನಿರ್ದೇಶಿಸಿರುವ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಪ್ರೇಮ್ ಎದುರು ನಾಯಕಿಯಾಗಿರುವುದು ಕೃತಿ ಕರಬಂಧ.
ಚಿತ್ರವನ್ನು ವಿತರಣೆ ಮಾಡುತ್ತಿರುವುದು ಜಯಣ್ಣ-ಭೋಗೇಂದ್ರ ಜೋಡಿ. ಯುವ ಸಂಗೀತ ನಿರ್ದೇಶಕ ಚರಣ್‍ರಾಜ್ ಸಂಗೀತ ಚಿತ್ರಕ್ಕಿದೆ. ಇವನು ಪ್ರೇಮಲೋಕದ ದಳಪತಿಯಂತೆ. ಹೇಗೆ ಅನ್ನೊದನ್ನ ತಿಳಿದುಕೊಳ್ಳೋಕೆ ಏಪ್ರಿಲ್ 13ರವರೆಗೆ ಕಾಯಬೇಕು.