ನಟಿ ರಮ್ಯಾ, ತಮ್ಮ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಕಳಚಿಟ್ಟು, ಅಪ್ಪಟ ರಾಜಕಾರಣಿಯಾಗಿದ್ದಾರೆ. ವಯಸ್ಸು ಆಗಲೇ 37 ವರ್ಷ. ಚಿತ್ರರಂಗದಲ್ಲಿದ್ದಾಗ ರಮ್ಯಾ ಅವರಿಗೆ ಇಂಥಾದ್ದೊಂದು ಪ್ರಶ್ನೆ ಆಗಾಗ್ಗೆ ಎದುರಾಗುತ್ತಿತ್ತು. ಇದರ ಮಧ್ಯೆ ಬ್ಯುಸಿನೆಸ್‍ಮನ್ ಒಬ್ಬರ ಜೊತೆ ಮದುವೆಯ ಸುಳಿವನ್ನೂ ಕೊಟ್ಟಿದ್ದರು ರಮ್ಯಾ. ಆದರೆ, ಅದೇಕೋ ಏನೋ.. ಅದು ಅಷ್ಟಕ್ಕೇ ನಿಂತು ಹೋಯ್ತು. ಈಗ ರಮ್ಯಾ ಮದುವೆ ಸುದ್ದಿ ಎತ್ತಿರುವುದು ರಮ್ಯಾ ಅವರ ತಾಯಿ ರಂಜಿತಾ.
ಮಗಳನ್ನು ಮದುವೆಯಾಗು ಎಂದು ಒತ್ತಾಯಿಸುತ್ತಲೇ ಇದ್ದೇನೆ. ಅವಳಿಗೆ ತಾನು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕು ಎಂಬ ಕನಸುಗಳಿವೆ. ಆದರೆ, ನನಗೆ ಹುಡುಗ ವಿದ್ಯಾವಂತನಾಗಿದ್ದು, ನೋಡೋಕೂ ಚೆನ್ನಾಗಿದ್ದು, ಒಳ್ಳೆಯವನಾಗಿದ್ದರೆ ಸಾಕು. ಇನ್ನು ರಮ್ಯಾಗೆ ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠವಿದೆ. ಅದುವರೆಗೂ ಸುಮ್ಮನಿರು ಅಂತಾಳೆ. ಆದರೆ ಮದುವೆಯಾಗಿಯೇ ಸಾಧನೆ ಮಾಡು ಅಂತಾ ನಾನು ಹೇಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಂಜಿತಾ.
ರಮ್ಯಾ ತಮ್ಮ ತಾಯಿಯ ಮದುವೆಯ ಡಿಮ್ಯಾಂಡ್‍ಗೆ ಸದ್ಯಕ್ಕಂತೂ ನೋ ಎಂದಿದ್ದಾರೆ. ರಾಜಕೀಯದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟು ಹೊರಟಿದ್ದಾರೆ.