` ಚುಟು ಚುಟು ಅಂತೈತಿ.. ಸೂಪರ್ ಹಿಟ್ ಆಗೇತಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
jutu jutu song becomes hit
Rambo 2 Movie Image

ಚುಟು ಚುಟು ಅಂತೈತಿ.. ಮಾಮ.. ಚುಟು ಚುಟು ಆಗೈತಿ.. ರ್ಯಾಂಬೋ 2 ಚಿತ್ರದ ಈ ಹಾಡು ಈಗ ಸೂಪರ್ ಹಿಟ್. ಎಲ್ಲೆಡೆ ವೈರಲ್ ಆಗುತ್ತಿದೆ.

ಶರಣ್ ಹಾಗೂ ಆಶಿಕಾ ರಂಗನಾಥ್ ಅವರ ಎರ್ರಾಬಿರ್ರಿ ಡ್ಯಾನ್ಸ್ ಕೂಡಾ ಹುಚ್ಚೆದ್ದು ಕುಣಿಸುವ ಹಾಗಿದೆ. ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲೇ ಬಂದಿರುವ ಹಾಡು. 

ಹಾಡಿನ ಸಾಹಿತ್ಯ ಮತ್ತು ಡ್ಯಾನ್ಸ್ ನೋಡುವಾಗಲೇ ಈ ಹಾಡು ಹಿಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ ಆಶಿಕಾ ರಂಗನಾಥ್.

ಶರಣ್ ಹಾಗೂ ಆಶಿಕಾ ಅವರ ವಿಭಿನ್ನ ಡ್ಯಾನ್ಸ್ ಸ್ಟೆಪ್ಪುಗಳ ಹುಬ್ಬೇರಿಸುವಂತಿವೆ.

ಹಾಡಿಗೆ ಕಂಪೋಸ್ ಮಾಡಿರುವುದು ಅರ್ಜುನ್ ಜನ್ಯಾ. ಹಾಡಿರುವುದು ಖ್ಯಾತಿ ಹಿಂದೂಸ್ಥಾನಿ ಗಾಯಕ ರವೀಂದ್ರ ಸೊರ್ಗಾಂವಿ ಮತ್ತು ಶಮಿತಾ ಮಲ್ನಾಡ್. ಭೂಷಣ್ ಕೊರಿಯೋಗ್ರಫಿ ಇರುವ ಹಾಡಿನಲ್ಲಿ ರಂಗು ರಂಗಿನ ಸೆಟ್ ಗಮನ ಸೆಳೆಯುತ್ತಿದೆ. ನಿರ್ದೇಶಕ ಅನಿಲ್, ಈ ಹಾಡು ಮತ್ತು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 ಅಂದಂಗ ಚುಟು ಚುಟು ಆಗ್ತೇತಿ ಅಂದ್ರೇನ... ಉತ್ತರ ಕರ್ನಾಟಕ ಮಂದೀನೇ ಹೇಳ್ರಲ..