` ಅಬ್ಬಬ್ಬಾ..ರಾಜರಥ ಅನೂಪ್ ಟೆನ್ಷನ್ನೇ ಬೇರೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajaratha team had a challenge
Rajaratha Movie Image

ರಾಜರಥ, ರಂಗಿತರಂಗದ ನಂತರ.. ಅದೇ ಚಿತ್ರತಂಡದಿಂದ  ಬರುತ್ತಿರುವ 2ನೇ ಸಿನಿಮಾ. ಚಿತ್ರದ ಟ್ರೇಲರ್ ಅದ್ಭುತವಾಗಿದೆ. ಪ್ರೇಕ್ಷಕರಿಂದಲೂ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಚಿತ್ರತಂಡದ, ಅದರಲ್ಲೂ ನಿರ್ದೇಶಕ ಅನೂಪ್ ಅವರ ಟೆನ್ಷನ್ನೇ ಬೇರೆ. ಅವರ ಈ ಟೆನ್ಷನ್‍ಗೆ ಕಾರಣ, ರಂಗಿತರಂಗ.

ಸುಮಾರು 3 ವರ್ಷಗಳ ಹಿಂದೆ ತೆರೆಕಂಡಿದ್ದಾಗ, ಇಡೀ ಚಿತ್ರತಂಡವೇ ಚಿತ್ರರಂಗಕ್ಕೆ ಹೊಸದು. ಆಗ ಅವರೂ ಹತ್ತರಲ್ಲಿ ಒಬ್ಬರು. ಆದರೆ, ರಂಗಿತರಂಗದ ಮ್ಯಾಜಿಕ್, ಅವರನ್ನು ಹತ್ತರಲ್ಲಿ ಹನ್ನೊಂದಾಗಿಸಿತು. ಈಗ 2ನೇ ಸಿನಿಮಾ. 

ರಂಗಿತರಂಗ ಚಿತ್ರದ ಸಕ್ಸಸ್ ಆಕಸ್ಮಿಕ ಅಲ್ಲ ಅನ್ನೋದನ್ನು ಪ್ರೂವ್ ಮಾಡಬೇಕಾದ ಹೊಣೆ, ಈಗ ಅನೂಪ್ ಅವರ ಮೇಲಿದೆ. ಚಿತ್ರದ ಬಗ್ಗೆ ಅನೂಪ್ ಅವರಿಗೆ ಆತ್ಮವಿಶ್ವಾಸ ಇದೆ.

ಚಿತ್ರದ ಹೀರೋ ನಿರೂಪ್ ಅವರಲ್ಲಿ ನಿಮ್ಮನ್ನು ನೀವೇ ನೋಡಿಕೊಳ್ತೀರಿ. ಆತನದ್ದು ಹೆದರುವವರನ್ನು ಹೆದರಿಸುವ, ಹೆದರಿಸುವವರ್ನು ಕಂಡರೆ ತಾನೇ ಹೆದರಿಕೊಳ್ಳುವ ಪಾತ್ರ. ಇನ್ನು ಬಸ್‍ವೊಂದು ಕಥೆ ಹೇಳುವ ಶೈಲಿಯೇ ಹೊಸದು. ಚಿತ್ರದ ಫಸ್ಟ್‍ಹಾಫ್‍ನಲ್ಲಿ ಬರುವ ದೃಶ್ಯಗಳಿಗೆ ಲಿಂಕ್ ಸಿಗುವುದು ದ್ವಿತೀಯಾರ್ಧದಲ್ಲಿ. ಚಿತ್ರದ ಚಿತ್ರೀಕರಣ ನೋಡಿದರೆ, ಅದೊಂದು ಟೂರ್‍ಗೆ ಹೋಗಿ ಬಂದ ಅನುಭವ. ವಿಭಿನ್ನವಾದ ಸಿನಿಮಾ ಇಷ್ಟವಾಗೋದು ಗ್ಯಾರಂಟಿ ಅಂತಾರೆ ಅನೂಪ್.

ಪ್ರೇಕ್ಷಕರಲ್ಲೂ ಅಂಥದ್ದೇ ಕುತೂಹಲ ಹಾಗೂ ರಾಜರಥ ಟೀಂ ಚೆನ್ನಾಗಿ ಸಿನಿಮಾ ಮಾಡಿರುತ್ತೆ ಅನ್ನೋ ವಿಶ್ವಾಸ ಇದೆ. ಇನ್ನೇನು ಕೆಲವೇ ಗಂಟೆ... ರಾಜರಥದ ಮ್ಯಾಜಿಕ್ ಪ್ರೇಕ್ಷಕರ ಎದುರು ಅನಾವರಣಗೊಳ್ಳಲಿದೆ.