` ರಾಜರಥದ ಸ್ಪೆಷಾಲಿಟಿ.. - ವಿತರಕರು ಕಂಡಂತೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajaratha distributor's special
Rajaratha Movie Image

ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್‍ಗೆ ರೆಡಿಯಾದಾಗ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ಪಾತ್ರಧಾರಿಗಳು, ಸಂಗೀತ ನಿರ್ದೇಶಕರು.. ಹೀಗೆ ಚಿತ್ರತಂಡದವರೆಲ್ಲ ಚಿತ್ರದ ವಿಶೇಷಗಳ ಬಗ್ಗೆ ಮಾತಾನಾಡ್ತಾರೆ. ಆದರೆ, ಈ ರಾಜರಥದ ಬಗ್ಗೆ ಚಿತ್ರತಂಡದವರಷ್ಟೇ ಪ್ರೀತಿಯಿಂದ ಮಾತನಾಡಿರುವುದು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಕಾರ್ತಿಕ್ ಗೌಡ.

ಅನೂಪ್ ಅವರ ಜೊತೆ ನನ್ನ ಗೆಳೆತನ ಶುರುವಾಗಿದ್ದು ರಂಗಿತರಂಗದ ನಂತರ. ಅವರದ್ದು ಹೊಸತನದ ಮೇಕಿಂಗ್, ಹೊಸತನದ ಕಥೆಗಳು ಇಷ್ಟವಾದವು. ಇದು ರಾಜರಥ ಚಿತ್ರದ ವಿತರಣೆಯನ್ನು ತೆಗೆದುಕೊಳ್ಳಲು ಒಂದು ಕಾರಣ. ಇನ್ನೊಂದು ಚಿತ್ರದ ನಿರ್ಮಾಪಕರಾದ ಸತೀಶ್, ಅಜಯ್ ರೆಡ್ಡಿ ಕೂಡಾ ಸ್ನೇಹಿತರು. ಅಷ್ಟೇ ಅಲ್ಲ, ಕಾರ್ತಿಕ್ ಗೌಡ ಅವರ ರಾಜಕುಮಾರ ಹಾಗೂ ಮಾಸ್ಟರ್‍ಪೀಸ್ ಚಿತ್ರಗಳನ್ನು ವಿದೇಶದಲ್ಲಿ ರಿಲೀಸ್ ಮಾಡುವ ಹೊಣೆ ಹೊತ್ತಿದ್ದವರು ರಾಜರಥದ ನಿರ್ದೇಶಕ ಅನೂಪ್ ಭಂಡಾರಿ. ಹೀಗೆ ಚಿತ್ರದ ವಿತರಣೆಯ ಜೊತೆಗೆ ಸ್ನೇಹ ಹೇಗೆ ಕಾರಣವಾಯ್ತು ಎಂದು ಹೇಳಿಕೊಂಡಿದ್ದಾರೆ ಕಾರ್ತಿಕ್ ಗೌಡ.

ರಾಜರಥ ಚಿತ್ರದಲ್ಲಿ ಪುನೀತ್ ಅವರ ಧ್ವನಿ ಬಳಸಿದ್ದು, ಒಂದು ಬಸ್ ಪ್ರೇಕ್ಷಕರ ಜೊತೆ ಮಾತನಾಡುವ ಕಲ್ಪನೆ.. ಕಾರ್ತಿಕ್ ಗೌಡ ಅವರಿಗೆ ಹಾಲಿವುಡ್ ಚಿತ್ರಗಳ ಸ್ಟೈಲ್ ನೆನಪಿಸಿದೆ. ಚಿತ್ರದಲ್ಲಿ ಬಳಸಿರುವ ಸೈಡ್ ಕಾರ್ ಇರುವ ಬೈಕ್‍ನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕಿಡಲಾಗುತ್ತಿದೆ. ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ, ಇನ್ನೊಂದು ಪ್ರೀಮಿಯರ್ ಶೋ ಮಾಡುವ ಯೋಜನೆ ಸದ್ಯಕ್ಕಿಲ್ಲ. ಇನ್ನು ಆನ್‍ಲೈನ್ ಬುಕ್ಕಿಂಗ್ ಅಂತೂ 

ಸೂಪರ್ ಸ್ಟಾರ್‍ಗಳ ಚಿತ್ರಕ್ಕೆ ಸಿಗುವಂತೆಯೇ ಆಗಿದೆ ಎಂದು ಖುಷಿಯಾಗಿದ್ದಾರೆ ಕಾರ್ತಿಕ್ ಗೌಡ.