ಮಫ್ತಿ, ಇತ್ತೀಚೆಗಿನ ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಅದರಲ್ಲಿಯೂ ಶಿವರಾಜ್ ಕುಮಾರ್, ಇಡೀ ಸಿನಿಮಾದಲ್ಲಿ ಕಣ್ಣುಗಳ ಮೂಲಕವೇ ಆಟವಾಡಿದ್ದರು. ಭೈರತಿ ರಣಗಲ್ಲು ಎಂಬ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಈಗ ತೆಲುಗಿಗೆ ರೀಮೇಕ್ ಆಗುತ್ತಿರುವ ಮಫ್ತಿಯಲ್ಲಿ ಶಿವಣ್ಣ ಪಾತ್ರವನ್ನು ಬಾಲಕೃಷ್ಣ ಮಾಡಲಿದ್ದಾರಂತೆ.
ತೆಲುಗು ರೀಮೇಕ್ ರೈಟ್ಸ್ ಈ ಹಿಂದೆಯೇ ಮಾರಾಟವಾಗಿದ್ದು, ಚಿತ್ರ ಟೇಕಾಫ್ ಆಗಿರಲಿಲ್ಲ. ತೆಲುಗು ಮಫ್ತಿಗೆ ಕನ್ನಡದಲ್ಲಿ ಕವಚ ಸಿನಿಮಾ ಮಾಡುತ್ತಿರುವ ನಿರ್ದೇಶಕ ಜಿವಿಆರ್ ವಾಸು, ನಿರ್ದೇಶಕರಾಗಲಿದ್ದಾರೆ ಎಂಬ ಮಾತುಗಳಿವೆ. ಶೀಘ್ರದಲ್ಲೇ ತೆಲುಗು ಮಫ್ತಿಯ ಕಂಪ್ಲೀಟ್ ಚಿತ್ರಣ ಸಿಗಲಿದೆ.