ಪ್ರಭುದೇವ, ಡ್ಯಾನ್ಸ್‍ಗೆ ನಿಂತರೆ, ಅವರ ಕಾಲು, ದೇಹ ಅಕ್ಷರಶಃ ಪಾದರಸದಂತೆಯೇ ಚಲಿಸೋಕೆ ಶುರು ಮಾಡುತ್ತವೆ. ಬಹುಶಃ ಅದನ್ನು ನೋಡಿಯೋ ಏನೋ.. ಅವರ ಅಭಿನಯದ ಈ ಚಿತ್ರಕ್ಕೆ ಮಕ್ರ್ಯುರಿ ಎಂದೇ ಹೆಸರಿಟ್ಟುಬಿಟ್ಟಿದ್ದಾರೆ. ಹಲವು ವರ್ಷಗಳ ನಂತರ ಪ್ರಭುದೇವ ಅಭಿನಯದ ಚಿತ್ರ, ಕನ್ನಡದಲ್ಲಿಯೂ ಬರುತ್ತಿದೆ.
ಅಂದಹಾಗೆ ಇದು ಮಾತಿಲ್ಲ, ಕಥೆಯಿಲ್ಲ ಶೈಲಿಯ ಚಿತ್ರ. ಪುಷ್ಪಕವಿಮಾನದ ನಂತರ, ಸ್ಟಾರ್ ನಟರೊಬ್ಬರು ಅಭಿನಯಿಸಿರುವ ಮೂಕಿ ಚಿತ್ರ.
ಕನ್ನಡದಲ್ಲಿ ಚಿತ್ರದ ಹಂಚಿಕೆ ಹೊಣೆಯನ್ನು ಜಯಣ್ಣ ಫಿಲ್ಮ್ಸ್ ಮತ್ತು ಪರಮ್‍ವಃ ಸ್ಟುಡಿಯೋ ಹೊತ್ತುಕೊಂಡಿವೆ. ರಕ್ಷಿತ್ ಶೆಟ್ಟಿ ಟೀಂನ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರದ ವಿತರಣೆ ಮಾಡುತ್ತಿದ್ದರೆ, ಸಿಂಗಲ್ ಸ್ಕ್ರೀನ್ ಥಿಯೇಟರ್‍ಗಳಲ್ಲಿ ಬಿಡುಗಡೆ ಜವಾಬ್ದಾರಿಯನ್ನು ಜಯಣ್ಣ ವಹಿಸಿಕೊಂಡಿದ್ದಾರೆ.
ಏಪ್ರಿಲ್ 13ಕ್ಕೆ ತೆರೆಗೆ ಬರುತ್ತಿರುವ ಚಿತ್ರ, ಮೌನದಲ್ಲಿಯೇ ಮೋಡಿ ಮಾಡುವ ಉತ್ಸಾಹದಲ್ಲಿದೆ.