ಪರೂಲ್ ಯಾದವ್, ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸುತ್ತುತ್ತಿದ್ದಾರೆ. ಅದಕ್ಕೆ ಕಾರಣ ಬಟರ್ ಫ್ಲೈ.
ಹಿಂದಿಯ ಕ್ವೀನ್ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ನಿರ್ಮಿಸಲಾಗುತ್ತಿದೆ. ಸಿನಿಮಾ ನಿರ್ಮಾಪಕರಲ್ಲಿ ಪರೂಲ್ ಯಾದವ್ ಕೂಡಾ ಒಬ್ಬರು. ಹೀಗಾಗಿಯೇ ಸಿನಿಮಾದ ನಾಯಕಿಯಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯೂ ಇದೆ. ಸಿನಿಮಾ ಶೂಟಿಂಗ್‍ಗಾಗಿ ಮೈಸೂರಿನಲ್ಲಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ. ಲೊಕೇಷನ್ ಫೈನಲ್ ಆದ ನಂತರ ತಮನ್ನಾ ಭಾಟಿಯಾ, ಕಾಜಲ್ ಅಗರ್‍ವಾಲ್ ಕೂಡಾ ಮೈಸೂರಿಗೆ ಬರಲಿದ್ದಾರೆ.
ಸದ್ಯಕ್ಕೆ ನಿರ್ದೇಶಕ ರಮೇಶ್ ಅರವಿಂದ್, ಪರೂಲ್ ಯಾದವ್, ನಿರ್ಮಾಪಕ ಮನು ಕುಮಾರನ್.. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.