ಜಾನಿ ಜಾನಿ ಯೆಸ್ ಪಪ್ಪಾ. ಪ್ರೀತಂ ಗುಬ್ಬಿ ಸಿನಿಮಾ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ನಟಿ ರಮ್ಯಾರನ್ನು ಪದ್ಮಾವತಿಯಾಗಿಸಿದ್ದ ಪ್ರೀತಮ್, ರಚಿತಾ ರಾಮ್ ಅವರನ್ನು ಹೊಸ ಪದ್ಮಾವತಿಯಾಗಿಸಿರುವ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.
ಜಾನಿ ಮೇರಾ ನಾಮ್ ನಂತರ ಚಿಜಿ & ಪ್ರೀತಂ ಒಟ್ಟಿಗೇ ಸೇರಿರುವ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕ್ ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ರಂಗಾಯಣ ರಘು, ಸಾಧುಕೋಕಿಲ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರದಲ್ಲಿದ್ದಾರೆ.
ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ.