ರಂಗಿತರಂಗ ಚಿತ್ರ ನೋಡಿದ್ದರೆ, ಆ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಕಾಣಿಸಿಕೊಂಡಿದ್ದರು. ರಾಜರಥ ಚಿತ್ರದಲ್ಲೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಅನೂಪ್. ಆದರೆ, ನೀವು ಗುರುತಿಸೋಕೆ ಸಾಧ್ಯವಿಲ್ಲ. ಅಕಸ್ಮಾತ್ ಗುರುತಿಸಿದರೆ, ನಿಮಗೆ ಒಂದು ಅವಾರ್ಡ್ ಕೊಡ್ತೇನೆ ಎಂದು ಚಾಲೆಂಜ್ ಹಾಕ್ತಾರೆ ಅನೂಪ್.
ಅನೂಪ್ ನಿರ್ದೇಶಕರೇ ಇರಬಹುದು, ನೋಡೋಕೆ ಸ್ಮಾರ್ಟ್ ಆಗಿಯೇ ಇದ್ದಾರೆ. ಹೀಗಿರುವಾಗ ಹೀರೋ ಆಗುವ ಚಾನ್ಸ್ ಬರಲಿಲ್ವಾ ಎಂದರೆ, ಬಂತು ಅಂತಾರೆ ಅನೂಪ್. ಯಾಕೆ ಒಪ್ಪಿಕೊಳ್ಳಲಿಲ್ಲ ಅಂದಾಗ ಗೊತ್ತಾಗಿದ್ದೇ ಅವರಿಗೆ ಆಕೆಯ ಭಯ ಇದೆ ಅನ್ನೋದು.
ಆಕೆ ಎಂದರೆ ಬೇರಾರೋ ಅಲ್ಲ. ಅವರ ಪತ್ನಿ. ಸಿನಿಮಾದಲ್ಲಿ ನಟಿಸೋದು ಎಂದರೆ ಒಂದಿಷ್ಟು ರೊಮ್ಯಾನ್ಸ್ ದೃಶ್ಯಗಳು ಇದ್ದೇ ಇರುತ್ತವೆ. ನಾಯಕಿಯ ಜೊತೆ ಹತ್ತಿರದಲ್ಲಿರುವ ದೃಶ್ಯಗಳಲ್ಲಿ ನಟಿಸಲೇಬೇಕಾಗುತ್ತೆ. ಹಾಗೇನಾದರೂ ನಾನು ನಟಿಸಿದರ ನನ್ನ ಪತ್ನಿ ನನ್ನನ್ನು ಮನೆಯಿಂದ ಹೊರಗೆ ಹಾಕ್ತಾಳೆ ಎಂದು ನಗ್ತಾರೆ ಅನೂಪ್.
ಆದರೆ, ನಿರ್ದೇಶನದಲ್ಲಿ ಬ್ಯುಸಿ ಇರುವುದು ಹಾಗೂ ನಟನೆಯಲ್ಲಿ ಅಷ್ಟು ಆಸಕ್ತಿ ಇಲ್ಲದೇ ಇರುವುದು ನಿಜವಾದ ಕಾರಣ.