ರಾಜರಥದ ರಾಜವಾಹನ ಬಸ್ಸು. ಅಂದಹಾಗೆ ನಿಮ್ಮ ರಾಜರಥ ಯಾವುದು..? ಸೈಕಲ್, ಬೈಕ್, ಕಾರ್.. ಹೀಗೆ ಯಾವುದೇ ಇರಲಿ.. ಅದು ನಿಮ್ಮ ರಾಜರಥ ತಾನೇ..
ಈಗ ನೀವು ನಿಮ್ಮ ರಾಜರಥದ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಿ. ರಾಜರಥದ ಅಧಿಕೃತ ಟ್ವಿಟರ್ ಅಥವಾ ಫೇಸ್‍ಬುಕ್ ಖಾತೆಗೆ ಟ್ಯಾಗ್ ಮಾಡಿ. ಗೆದ್ದ 10 ಮಂದಿಗೆ ಬಹುಮಾನವೂ ಇದೆ. ಮೈ ರಾಜರಥ ಅನ್ನೋ ಹ್ಯಾಷ್‍ಟ್ಯಾಗ್ ಇದ್ದರೆ ಅಯ್ತು.
ಈ ಸೆಲ್ಫಿ ಚಾಲೆಂಜ್ ಶುರು ಮಾಡಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ರಾಜರಥದಲ್ಲಿನ ರಾಜರಥವೇ ಪುನೀತ್. ಅವರು ತಮ್ಮ ಸೈಕಲ್ ಜೊತೆ ಸೆಲ್ಫಿ ತೆಗೆದುಕೊಂಡು ಅಪ್‍ಲೋಡ್ ಮಾಡಿದ್ದಾರೆ. ಇನ್ನು ಅಭಿಮಾನಿಗಳ ಸರದಿ.
ಈ ಮೈ ರಾಜರಥ ಸ್ಪರ್ಧೆಯಲ್ಲಿ ಚಿತ್ರರಂಗದ ಬೇರೆ ಬೇರೆ ಸ್ಟಾರ್‍ಗಳೂ ಪಾಲ್ಗೊಳ್ಳುತ್ತಿದ್ದಾರೆ.