ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಇದನ್ನು ಪುನೀತ್ ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದರೆ, ಕೆಲವೇ ಕೆಲವು ಅಭಿಮಾನಿಗಳು ರಚಿತಾ ಬೇಡ ಎಂದು ಅಭಿಯನ ನಡೆಸಿರುವುದಕ್ಕೆ ಸ್ವತಃ ನಟಿ ರಚಿತಾ ರಾಮ್ ಆಘಾತ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗೇಕೆ ಆಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನನಗೆ ಡಾ.ರಾಜ್‍ಕುಮಾರ್ ಫ್ಯಾಮಿಲಿ ಬಗ್ಗೆ ಗೌರವ ಇದೆ. ಪುನೀತ್ ರಾಜ್‍ಕುಮಾರ್ ಜೊತೆ ನಟಿಸುತ್ತಿರುವುದಕ್ಕೆ ಖುಷಿಯೂ ಇದೆ. ದಯವಿಟ್ಟು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಬೇಡಿ. ನಾನು ನಿಮ್ಮ ಮನೆಯ ಹೆಣ್ಣು ಮಗಳು ಎಂದಿದ್ದಾರೆ ರಚಿತಾ.
ಸ್ವತಃ ಪುನೀತ್ ರಾಜ್‍ಕುಮಾರ್ ಕೂಡಾ ರಚಿತಾ ಅವರಿಗೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ ಎಂದು ಧೈರ್ಯ ಹೇಳಿದ್ದಾರಂತೆ.
Related Articles :-